ಕೂಗು ನಿಮ್ಮದು ಧ್ವನಿ ನಮ್ಮದು

ಭಾರತಕ್ಕೆ ಬರುವಂತ ಅಫ್ಘಾನ್ನರಿಗೆ ತಾತ್ಕಾಲಿಕ ವೀಸಾ ವ್ಯವಸ್ಥೆ

ಬೆಂಗಳೂರು: ಅಫ್ಘಾನ್ ನಲ್ಲಿ ನಡೆಯುತ್ತಿರೋ ನರಮೇಧದಿಂದ ಹೈರಾಣಾಗಿರೋ ಅಫ್ಘಾನಿಸ್ತಾನದವರು ಭಾರತಕ್ಕೆ ಬರಲು ಇಚ್ಛಿಸುವವರಿಗೆ ಭಾರತದಿಂದ ತಾತ್ಕಾಲಿಕ ವೀಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟದಲ್ಲಿರೋ ಅಪ್ಘಾನ್ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ ಹೆಲ್ಪ್ ಡೆಸ್ಕ್ ವ್ಯವಸ್ಥೆಯನ್ನು ಮಾಡಿದೆ.

ಈ ಹೆಲ್ಪ್ ಡೆಸ್ಕ್ ಗೆ ನಿರಂತರವಾಗಿ ವಿದ್ಯಾರ್ಥಿಗಳು ಕರೆ ಮಾಡಿ ನಮ್ಮ ತಂದೆ ತಾಯಿಯನ್ನು ಭಾರತ ಮತ್ತು ಬೆಂಗಳೂರಿಗೆ ಕರಿಸಿಕೊಡುವಂತೆ ಮನವಿಯನ್ನು ಮಾಡುತ್ತಿದ್ದಾರೆ. ಹಾಗಾಗಿ ತಾತ್ಕಾಲಿಕ ವೀಸಾ ಆನ್‍ಲೈನ್ ನಲ್ಲಿ ವೆಬ್‍ಸೈಟ್ ಮೂಲಕ ಅಪ್ಲೈ ಮಾಡಿ ತಾತ್ಕಾಲಿಕ ವೀಸಾ ಪಡೆದುಕೊಳ್ಳಲುವಂತೆ ಸಲಹೆಯನ್ನು ಸೂಚಿಸಲಾಗಿದೆ ಎಂದು ADGP ಉಮೇಶ್ ಕುಮಾರ್ ತಿಳಿಸಿದ್ರು.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದಿರೋ ಅಪ್ಘಾನ್ ವಿದ್ಯಾರ್ಥಿಗಳ ವೀಸಾದ ಅವಧಿ ಮುಗಿದಿರೋದರಿಂದ ಅವರು ಕೂಡ ವೀಸಾದ ಅವಧಿಯನ್ನ ವಿಸ್ತರಿಸಲು ಮನವಿ ಮಾಡಿದ್ದರಿಂದ ವೆಬ್‍ಸೈಟ್ ನಲ್ಲಿ ಅಪ್ಲೈ ಮಾಡಿ ತಾತ್ಕಾಲಿಕ ವೀಸಾ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

error: Content is protected !!