ಕೂಗು ನಿಮ್ಮದು ಧ್ವನಿ ನಮ್ಮದು

ಸಬ್ಕಾ ಸಾಥ್, ಸಬ್ಕಾ ವಿಕಾಸ್ ಘೋಷಣೆ ಗುರು ರವಿದಾಸ್‍ ರಿಂದ ಪ್ರೇರಿತವಾಗಿದೆ: ಯೋಗಿ ಆದಿತ್ಯನಾಥ್

ಲಕ್ನೋ: ನರೇಂದ್ರ ಮೋದಿಯವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ನೀತಿಯು ಗುರು ರವಿದಾಸರ ಬೋಧನೆಗಳಿಂದ ಪ್ರೇರಿತವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಮುಂಜಾನೆ ಸೀರ್ ಗೋವರ್ಧನ ಆವರಣದಲ್ಲಿರುವ ರವಿದಾಸ್ ದೇವಸ್ಥಾನಕ್ಕೆ ಭೇಟಿ ನೀಡಿ 15 -16ನೇ ಶತಮಾನದ ಕವಿಗೆ ನಮನ ಸಲ್ಲಿಸಿದ್ರು.

ಈ ವೇಳೆ ಮಾತನಾಡಿದ ಆದಿತ್ಯನಾಥ್, ಇಂದು ಮಾಘ ಪೂರ್ಣಿಮಾ ಮತ್ತು ಪುಣ್ಯಭೂಮಿಯಾದ ಕಾಶಿಯಲ್ಲಿ ಶ್ರೀ ಗೋವರ್ಧನದಲ್ಲಿ ಜನಿಸಿದ ಗುರು ರವಿದಾಸ್ ಅವರ ಜನ್ಮದಿನವಾಗಿದೆ. ಇವತ್ತು ಲಕ್ಷಾಂತರ ಜನರು ಸದ್ಗುರುವಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ರು.
ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಾವೆಲ್ಲರೂ ಸಬ್ಕಾ ಸಾಥ್, ಸಬ್ಕಾ ವಿಕಾಸ್ ನೀತಿಯನ್ನು ಮುನ್ನಡೆಸುತ್ತಿದ್ದೇವೆ.

ಇದು ಸಂತ ರವಿದಾಸ್ ಅವರ ಬೋಧನೆಗಳಿಂದ ಪ್ರೇರಿತವಾಗಿದೆ ಎಂದರು. ಕಾರ್ಯಕ್ರಮದ ಪುಟ್ಟ ವೀಡಿಯೋವನ್ನು ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಪ್ರೀತಿ, ಏಕತೆ, ಸೌಹಾರ್ದತೆ ಮತ್ತು ಸಾಮಾಜಿಕ ಸೌಹಾರ್ದತೆಯಂತಹ ಮಾನವೀಯ ಮೌಲ್ಯಗಳು ಹಾಗೂ ಚಿಂತನೆಗಳ ಬೆಳಕಿನಲ್ಲಿ ಮಾನವ ಸಮಾಜವನ್ನು ಬೆಳಗಿದ ಸಂತ ಶಿರೋಮಣಿ ಗುರು ರವಿದಾಸ್ ಅವರ ಜನ್ಮಸ್ಥಳವಾದ ಸೀರ್ ಗೋವರ್ಧನ ಲಂಗರ್‍ನಲ್ಲಿ ಪ್ರಸಾದ ಸ್ವೀಕರಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

error: Content is protected !!