ತುಮಕೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ H.ಬೈರಾಪುರ ಗೇಟ್ ಹತ್ತಿರ ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಆಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಇನ್ನೂ ಮೃತ ವ್ಯಕ್ತಿಯನ್ನು ಚಿಕ್ಕ ನಾಯಕನ ಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಶ್ರೀಧರ್ ಎಂದು ಹೇಳಲಾಗಿದೆ.
ತಿಪಟೂರಿನ ಹುಚ್ಚನಟ್ಟಿ ಚಿಪ್ಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್, ಬುಧವಾರ ರಾತ್ರಿ ಕೆಲಸವನ್ನು ಮುಗಿಸಿಕೊಂಡು ತಮ್ಮ ಬೈಕಿ ಅಲ್ಲಿ ಮರಳಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ರು. ಈ ವೇಳೆ H.ಬೈರಾಪುರ ಗೇಟ್ ಹತ್ತಿರ ದ್ವಿಚಕ್ರ ವಾಹನ ಕಂಟ್ರೋಲ್ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಆಗಿದೆ. ದ್ವಿಚಕ್ರ ವಾಹನ ಒಡಿಸುತ್ತಿದ್ದ ಶ್ರೀಧರ್, ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಅದೇ ಗ್ರಾಮದ ನಿವಾಸಿ ಮಂಜುನಾಥ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹೊನ್ನವಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.