ನವದೆಹಲಿ: ಸೋಷಿಯಲ್ ಮೀಡಿಯಾದದಲ್ಲಿ ಪ್ರತಿದಿನ ಅನೇಕ ಆಘಾತಕಾರಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ನೀವು ಕೂಡ ಅನೇಕ ಅಪಘಾತದ ವಿಡಿಯೋಗಳನ್ನು ನೋಡಿರುತ್ತೀರಿ. ಅದೇ ರೀತಿ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಸರ್ಕಲ್ವೊಂದರಲ್ಲಿ ನಡೆದಿರುವ ಈ ಅಪಘಾತದ ದೃಶ್ಯವನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.
ಬೈಕ್ಗಳ ನಡುವೆ ಭೀಕರ ಅಪಘಾತ
ವೈರಲ್ ಆಗಿರುವ ಈ ವಿಡಿಯೋದಲ್ಲಿ 2 ಬೈಕ್ಗಳು ಭೀಕರ ಡಿಕ್ಕಿಯಾಗಿದೆ. ಟ್ವಿಟರ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನೋಡ ನೋಡುತ್ತಿದ್ದಂತೆಯೇ ಭೀಕರ ಅಪಘಾತ ಸಂಭವಿಸುತ್ತದೆ. ಈ ದೃಶ್ಯವನ್ನು ನೋಡಿದ ನೆರೆದಿದ್ದವರು ಒಂದುಕ್ಷಣ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋದಲ್ಲಿ ಎರಡು ಬೈಕ್ಗಳು ಪರಸ್ಪರ ಡಿಕ್ಕಿ ಹೊಡೆಯುವುದನ್ನು ನೀವು ಕಾಣಬಹುದು. ಡಿಕ್ಕಿ ಹೊಡೆದ ಮರು ಕ್ಷಣವೇ ಬೈಕ್ ಮೇಲಿಂದ ಚಾಲಕರಿಬ್ಬರೂ ರಸ್ತೆಗೆ ಬೀಳುತ್ತಾರೆ. ಒಬ್ಬ ಚಾಲಕನ ತಪ್ಪಿನಿಂದ ಮತ್ತೊಬ್ಬ ಚಾಲಕನಿಗೆ ಇಲ್ಲಿ ತೊಂದರೆಯಾಗಿದೆ. ವೇಗವಾಗಿ ಬಂದು ಬೈಕ್ ಗುದ್ದಿಸಿದ ಮತ್ತೊಂದು ಬೈಕ್ನ ಸವಾರ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಬೈಕ್ ಅಪಘಾತದಿಂದ ಒಬ್ಬ ಸವಾರ ನೆಲಕ್ಕೆ ಬಿದ್ದು ನರಳುತ್ತಿದ್ದರೆ, ಮತ್ತೊಬ್ಬ ತಕ್ಷಣ ಎದ್ದವನೇ ತನ್ನ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಲು ಪತ್ನಿಸಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಜನರು ಪ್ರಯತ್ನಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ
ಬೈಕ್ಗೆ ಡಿಕ್ಕಿ ಹೊಡೆಸಿದ ಮತ್ತೊಂದು ಬೈಕ್ನ ಸವಾರನನ್ನು ಹಿಡಿಯಲು ಬೆನ್ನುಹತ್ತಿದ್ದಾರೆ. ಈ ವೇಳೆ ಒಬ್ಬಾತ ಆತನ ಬೈಕ್ ಹಿಡಿದು ಜಗ್ಗಿ ಬೀಳಿಸಿದ್ದಾನೆ. ಈ ವೇಳೆ ಆತ ಜನರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. 45 ಸೆಕೆಂಡುಗಳ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬೈಕ್ಗೆ ಡಿಕ್ಕಿ ಹೊಡೆಸಿ ಎಸ್ಕೇಪ್ ಆಗುತ್ತಿದ್ದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.