ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಎಪಿಎಂಸಿ ಪೊಲೀಸರ ಭರ್ಜರಿ ದಾಳಿ: ಸಿಪಿಐ ಜಾವೀದ್ ಮುಷಾಪುರೆ ನೇತೃತ್ವದಲ್ಲಿ ಜೂಜು ಅಡ್ಡೆ ಮೇಲೆ ದಾಳಿ 14 ಮಂದಿ ಅಂದರ್

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು,  ಲಾಕ್ಡೌನ್ ಸಮಯದಲ್ಲಿ ತೆಪ್ಪಗೆ ಮನೆಯಲ್ಲಿ ಇರಬೇಕಿದ್ದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ 14 ಜನ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ನಗದು, ಮೊಬೈಲ್ಗಳು, ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಕೊರೊನಾ ಲಾಕ್ ಡೌನ್ ಲಾಭ ಮಾಡಿಕೊಂಡಿದ್ದ ಕೆಲ ಕಿಡಿಗೇಡಿಗಳು ನಗರದ ಎಪಿಎಂಸಿ ಠಾಣಾ ವ್ಯಾಪ್ತಿಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ರಾಜಾರೋಷವಾಗಿ ಜೂಜಾಟದಲ್ಲಿ ತೊಡಗಿಕೊಂಡಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಎಪಿಎಂಸಿ ಠಾಣೆ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದ ತಂಡವು ದಾಳಿ ಮಾಡಿ 14 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಇನ್ನು ಬಂಧಿತ ಆರೋಪಿಗಳನ್ನು 1) ಸಮೀರ್ ರಾಜೇಕಾಂತ್ ಪಠಾಣ, 2) ನರ್ಸಿಂಗ್ ಜೈಸಿಂಗ್ ರಜಪೂತ್, 3) ಬಾಳು ಅಶೋಕ್ ಬಿರಾಜೆ, 4) ವಿಕ್ಕಿ ಅಶೋಕ ಕೇಸರಕರ, 5) ಮತೀನ್ ಇಮಾಮಹುಸೇನ್ ಶೇಖನೂರ, 6) ಅತೀನ್ ಮೆಹಬೂಬ್ ಅತ್ತಾರ, 7) ಮತೀಬ್ ವಿನಾಯಕ ಸವದತ್ತಿಕರ್, 8) ಸಾಕಿಬ್ ಹಾರೂನ್ ತಂಬಾಬೋಲೆ, 9) ವಿಜಯ ಬಾವುಕನ್ನಾ ದೇಮನಾಚೆ, 10) ವಿನಾಯಕ ರಾಜು ಬೆನ್ನಾಳಕರ್, 11) ಟಿಂಕು ಸಿದ್ದಪ್ಪ ದೊಡಮನಿ 12) ದಿನೇಶ್ ಲಕ್ಷ್ಮಣ ಪಾಟೀಲ್, 13) ಸಿದ್ದಾಂತ ಸುಧೀರ ಪಾಟೀಲ್, 14) ವಾಸಿಮ್ ಬಾಬಾಜನ ಖಾನಾಪುರೆ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳಿಂದ 1 ಲಕ್ಷ 57 ಸಾವಿರದ 800 ರೂಪಾಯಿ ನಗದು, 15 ಮೊಬೈಲ್, 2 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಡಿಸಿಪಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಎಪಿಎಂಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!