ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ ನಡೆದಿದೆ. ಪಾಪಿ ತಂದೆಯೊಬ್ಬ 3 ವರ್ಷದ ಹೆತ್ತ ಮಗಳನ್ನೇ ಕೊಂದು ಸಮಾಧಿ ಮಾಡಿರುವ ಧಾರುಣ ಘಟನೆ ನಡೆದಿದೆ. ದಾವಣಗೇರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದ ಹೊರವಲಯದಲ್ಲಿ ಮಗಳ ಶವ ಹೂತಿರುವ ಕಟುಕ ತಂದೆ, ಒಂದು ತಿಂಗಳ ಹಿಂದೆ ಈ ಕೃತ್ಯವೆಸಗಿದ್ದಾನೆ.
ಮೂಲತಃ ಗುತ್ತಿದುರ್ಗ ಗ್ರಾಮದವನಾದ ಪಾಪಿ ಹಂತಕ ಚಿತ್ರದುರ್ಗದಲ್ಲಿ ವಾಸವಿದ್ದ. ಇನ್ನು ಗುತ್ತಿದುರ್ಗದ ಮಹಿಳೆ ಶಶಿಕಲಾಳನ್ನ ಎರಡನೇ ವಿವಾಹವಾಗಿದ್ದ ಆರೋಪಿ ನಿಂಗಪ್ಪ, ಮೊದಲ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳಿದ್ದರೂ ಎರಡನೇ ವಿವಾಹವಾಗಿದ್ದ. ಇನ್ನು ಹಂತಕನ ಎರಡನೇ ಮದುವೆಯ ಗುಟ್ಟನ್ನು ಮುಚ್ಚಿಡಲು ಒಂದು ತಿಂಗಳ ಹಿಂದೆ ಎರಡನೇ ಹೆಂಡತಿಯ ಹೆಣ್ಣು ಮಗುವನ್ನು ಕರೆದೋಯ್ದು ಹತ್ಯೆ ಮಾಡಿ ಹಂತಕ ಯಾರಿಗೂ ಗೊತ್ತಾಗದಂತೆ ಶವ ಹೂತಾಕಿದ್ದ. ಇನ್ನು 03 ವರ್ಷದ ಕಂದಮ್ಮ ಸಿರಿಶಾ ತಂದೆಯಿಂದಲೇ ಹತ್ಯೆಯಾದ ನತದೃಷ್ಟಳಾಗಿದ್ದಾಳೆ.
ಇನ್ನು ಎರಡನೇ ಹೆಂಡತಿ ಶಶಿಕಲಾ ಇಪ್ಪತ್ತು ದಿನಗಳ ಹಿಂದೆಯೇ ಮಗು ಕಾಣೆಯಾದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಇನ್ನು ಗುತ್ತಿದುರ್ಗ ಗ್ರಾಮಸ್ಥರಿಂದ ಮಗು ಸಮಾಧಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀಸ್ ಅಧಿಕಾರಿಗಳು ಗುತ್ತಿದುರ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.