ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯೆ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್ಸಿನಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ 40 ಜನ ಪ್ರಯಾಣಿಕರ ಪ್ರಾಣ ಉಳಿದಿದೆ ಹು-ಧಾ ಬಿ.ಆರ್.ಟಿ.ಎಸ್ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ತಲೆ ಸುತ್ತು ಬಂದ ಹಿನ್ನೆಲೆ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ.
ಹು-ಧಾ ಅವಳಿ ನಗರದ ನಡುವೆ ನವನಗರ ಸೇತುವೆ ಬಳಿ ಸೆಪ್ಟಂಬರ್ 5 ರಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬಸ್ ಚಾಲನೆ ಮಾಡುತ್ತಲೇ ತಲೆಸುತ್ತು ಬಂದು ಚಾಲಕ ಕೆಳಗೆ ಬಿದ್ದಿದ್ದಾನೆ. ತಲೆ ಸುತ್ತುತ್ತಿದ್ದರೂ ಸಮಯ ಪ್ರಜ್ಞೆಯಿಂದ ಬಸ್ ಕಂಟ್ರೋಲ್ ಮಾಡಿದ ಚಾಲಕ, ಬಸ್ ಕಂಟ್ರೋಲ್ ಗೆ ಬಂದು ನಿಲ್ಲುತ್ತಿದ್ದಂತೆಯೇ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ನಂತರ ಚಾಲಕನಿಗೆ ನೀರು ಕುಡಿಸಿದ ಬಸ್ ನಲ್ಲಿದ್ದ ಪ್ರಯಾಣಿಕರು ಚಾಲಕನ ನೆರವಿಗೆ ನಿಂತಿದ್ದಾರೆ. ಬಸ್ ಚಾಲಕನಿಗೆ ಆದ ಅನಾಹುತದಿಂದ ಗಾಬರಿಗೊಂಡ ಪ್ರಯಾಣಿಕರು ಕೆಲಹೊತ್ತು ಗಾಬರಿಗೊಂಡಿದ್ರು. ಸತತ ಐದು ನಿಮಿಷಕ್ಕೂ ಅಧಿಕಾಲ ನಡೆದ ಈ ಘಟನೆ ಬಸ್ಸಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಟ್ಟಾರೆ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಪ್ರಮಾಣದ ದುರಂತವೊಂದು ತಪ್ಪಿದೆ.