ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿರುವ ಹಿನ್ನೆಲೆ ಶಿರಾದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಬಿಐ ನವ್ರು ಇಂಥ ಸಮಯದಲ್ಲಿ ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಅನ್ನೋ ಮಾಹಿತಿಯನ್ನ ಕೊಡಬೇಕು. ಆ ಮೂಲಕ ಜನಗಳಲ್ಲಿರೋ ಸಂಶಯವನ್ನ ದೂರ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಐಟಿ ಮತ್ತು ಇಡಿ ಯಿಂದ ನಡೆದ ದಾಳಿಯ ಮುಂದುವರೆದ ಭಾಗ ಇದಾಗಿರಬಹುದು. ಉಪಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲಾ. ಉಪಚುನಾವಣೆಗೆ ಇದನ್ನ ತಾಳೇ ಮಾಡಬೇಡಿ ಎಂದಿರುವ ಎಚ್ಡಿಕೆ, ನಾವು ಯಾವುದೇ ರೀತಿಯ ಅಪರಾಧ ಮಾಡದಿದ್ದಾಗ ಸಿಬಿಐ ಅಂತಾ ಯಾವುದೇ ದಾಳಿಗೆ ಹೆದರಬೇಕಿಲ್ಲಾ ಎಂದಿದ್ದಾರೆ. ಇದೇ ವೇಳೆ ತಮ್ಮ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸಿದ್ದರಾಮಯ್ಯ ಅವ್ರ ಸಂಸ್ಕೃತಿ ತೋರಿಸುತ್ತೆ. ಅವರು ಬೆಳೆದು ಬಂದ ಸಂಸ್ಕ್ರತಿ ಅದು. ಸಿದ್ದರಾಮಯ್ಯನವ್ರಿಗೆ ನೋವು ಇರೋದೆ ನನ್ನ ಮೇಲೆ. ಕಾಂಗ್ರೆಸ್ ಗೆ ಇವ್ರು ಸೇರಲು ಶಕ್ತಿ ಕೊಟ್ಟಿದ್ದೆ ಜೆಡಿಎಸ್ ಪಕ್ಷ. ಜೆಡಿಎಸ್ ಕಾರ್ಯಕರ್ತರ ದುಡಿಮೆಯ ಫಲವಾಗಿ ಕಾಂಗ್ರೆಸ್ ನಲ್ಲಿ ಅವ್ರನ್ನ ಗುರುತಿಸಿದ್ದಾರೆ. ಇಲ್ಲದೇ ಇದ್ದಿದ್ರೇ ಇವ್ರನ್ನ ಯಾರು ಗುರುತಿಸೋರು ಎಂದಿರುವ ಕುಮಾರಸ್ವಾಮಿ, ಯಾವ ಪಕ್ಷ ಇವರನ್ನ ಬೆಳೆಸುತ್ತದೋ ಆ ಪಕ್ಷಕ್ಕೆ ಬೆಂಕಿ ಹಾಕೋದೆ ಇವ್ರ ಕೆಲಸ. ಈಗ ಕರ್ನಾಟಕ ರಾಜ್ಯದ ಕಾಂಗ್ರೆಸ್ ಗೆ ಅಂತಿಮ ಮೊಳೆ ಹೊಡೆಯೋದು ಸನ್ಮಾನ್ಯ ಸಿದ್ದರಾಮಯ್ಯನವ್ರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.