ಕೂಗು ನಿಮ್ಮದು ಧ್ವನಿ ನಮ್ಮದು

ಶಾಸಕ ಮಹೇಶ್ ಕುಮಟಳ್ಳಿ ಕಾರಿಗೆ ಬೀದಿ ವ್ಯಾಪಾರಿಗಳಿಂದ ಘೇರಾವ್

ಅಥಣಿ: ಕೊರೋನಾ ಲಾಕ್ ಡೌನ್ ನಿಂದ ಕಂಗೆಟ್ಟಿದ್ದ ಅಥಣಿಯ ಬೀದಿ ವ್ಯಾಪಾರಿಗಳು ಅಥಣಿ ಶಾಸಕ ಮಹೇಶ ಕುಮಠಳ್ಳಿ ಕಾರಿಗೆ ಘೇರಾವ್ ಹಾಕಿ ಮನವಿ ಸಲ್ಲಿಸಿದ್ದಾರೆ. ಮನವಿ ಕೊಡುವ ವೇಳೆ ಕೈ ಮುಗಿದು ಬೇಡಿಕೆ ಈಡೇರಿಸುವಂತೆ ಅಂಗಲಾಚಿದ ಮಹಿಳೆಯರು ತಮ್ಮ ಸಂಕಷ್ಟಕ್ಕೆ ಸ್ಪಂದಿಸುವಂತೆ ಬೇಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಲಾಕ್ ಡೌನ್ ನಿಂದಾಗಿ ಬದುಕು ಬೀದಿಗೆ ಬಿದ್ದಿದ್ದು ಸರ್ಕಾರ ಸಹಾಯಕ್ಕೆ ಮುಂದಾಗಬೇಕೆಂದು ಅಂಗಲಾಚಿದ್ದಾರೆ. ಅಥಣಿ ಮಾರುಕಟ್ಟೆ ಪ್ರದೇಶದಲ್ಲಿ ವಹಿವಾಟು ನಡೆಸಲು ಅವಕಾಶ ಕೊಡುವಂತೆ ಆಗ್ರಹಿಸಿ ಈ ಮನವಿ ನೀಡಲಾಗಿದ್ದು, ಕೊವಿಡ್ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳಿಗೆ ಇದು ತಪ್ಪದ ನಿತ್ಯದ ಕಿರಿಕಿರಿಯಾಗಿದೆ. ಶಾಸಕ ಮಹೇಶ ಕುಮಠಳ್ಳಿ ಎದುರು ಅಳಲು ತೋಡಿಕೊಂಡ ಈ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ.

error: Content is protected !!