ವಿಜಯಪುರ: ಭೀಮಾತೀರದಲ್ಲಿ ಮತ್ತೆ ಶುರುವಾಯ್ತಾ ಕದನ.? ಆತಂಕ ಹೆಚ್ಚಿಸಿದ ಬಾಗಪ್ಪ ಹರಿಜನ್ ಮಾತು
ಭೀಮಾತೀರದ ಹಂತಕರ ಕುಟುಂಬಗಳ ಕಲಹ ಮತ್ತೆ ಶುರುವಾಗಿದೆ. ಚಂದಪ್ಪ ಹರಿಜನ್ ಕುಟುಂಬ ಹಾಗೂ ಬಾಗಪ್ಪ ಹರಿಜನ್ ನಡುವೆ ಕಲಹ ಆರಂಭವಾಗಿದೆ. ನಾನು ಯಾರ ತಂಟೆಗೂ ಹೋಗೋದಿಲ್ಲ. ನನ್ನ ಸಹವಾಸಕ್ಕೆ ಬಂದ್ರೆ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಮನೆಗೆ ಹೊಕ್ಕು ಹೊಡೆದು ಹಾಕ್ತೇನೆ. ಹಣೆಗೆ ಗನ್ ಹಚ್ಚಿ ಹೊಡೆದು ಹಾಕ್ತೇನೆ ಎಂದು ಭಾಗಪ್ಪ ಹರಿಜನ್ ವಾರ್ನಿಂಗ್ ಮಾಡಿದ್ದಾರೆ. ಚಂದಪ್ಪ ಹರಿಜನ್ ಸಂಬಂಧಿಕರು ನನಗೆ ತೊಂದರೆ ಮಾಡುತ್ತಿದ್ದಾರೆ. ಜನರ ಮುಂದೆ ಸುಳ್ಳು ಹೇಳಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಮಯ ಬಂದಾಗ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ ಎಂದು ವಿಜಯಪುರದಲ್ಲಿ ಭೀಮಾತೀರದ ಹಂತಕ ಭಾಗಪ್ಪ ಹರಿಜನ್ ಹೇಳಿಕೆ ನೀಡಿದ್ದು, ಭೀಮಾ ತೀರದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ.