ದಾವಣಗೆರೆ: ದಾವಣಗೆರೆಯ ಎಸ್.ಎಸ್. ಮಲ್ಲಿಕಾರ್ಜುನ ಫಾರ್ಮ್ ಹೌಸ್ ಗೆ ನಟ ದರ್ಶನ ಭೇಟಿ ನೀಡಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ್ ರ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದ ನೆಚ್ಚನ ನಟ ದರ್ಶನ್ ಹಳದಿ ಬಣ್ಣದ ಲ್ಯಾಂಬೋರ್ಗೀನಿ ಕಾರ್ ನಲ್ಲಿ ಬಂದಿದ್ದು, ಗೆಸ್ಟ್ ಹೌಸ್ ಗೆ ಪೊಲೀಸ್ ರಿಂದ ಬಿಗಿ ಬಂದೋಬಸ್ತ್ ನೀಡಲಾಗಿದೆ.
ಅಲ್ಲದೇ ಲ್ಯಾಂಬೋರ್ಗಿನ್ ಕಾರ್ ಮೋಹ ಪೋಲಿಸರನ್ನು ಬಿಟ್ಟಿಲ್ಲ. ಹೀಗಾಗಿ ದರ್ಶನ್ ಲ್ಯಾಂಬೋರ್ಗೀನಿ ಕಾರಿನ ಪೋಟೊವನ್ನು ಪೋಲೀಸರು ಕ್ಲಿಕ್ಕಿಸಿ ಕೊಳ್ಳುತ್ತಿದ್ದಾರೆ. ಇನ್ನು ದರ್ಶನ್ ರನ್ನ ನೋಡಲು ಅವರ ಅಭಿಮಾನಿಗಳು ಗೆಸ್ಟ್ ಹೌಸ್ ಹೋರಗಡೆ ಕಾದು ಕುಳಿತಿದ್ದಾರೆ. ಈ ವೇಳೆ ದರ್ಶನ್ “ದರ್ಶನ’ ಕ್ಕೆ ಬಂದವರಿಗೆ ಬಾಪೂಜಿ ಗೆಸ್ಟ್ ಹೌಸ್ ಮುಂಭಾಗದಲ್ಲಿ ಲಾಠಿ ರುಚಿ ತೋರಿಸಲಾಯಿತು.
ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಗೆಸ್ಟ್ ಹೌಸ್ ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ರು. ಇನ್ನು ದರ್ಶನ್ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಗೆಸ್ಟ್ ಹೌಸ್ ಒಳಗೆ ದರ್ಶನ್ ಇರುವ ಹಿನ್ನಲೆ ಬೆಳಿಗ್ಗೆಯಿಂದ ಅಭಿಮಾನಿಗಳ ನೆಚ್ಚಿನ ನಟನಿಗಾಗಿ ಕಾಯುತ್ತಿದ್ದಾರೆ. ಅಭಿಮಾನಿಗಳು ಡಿ ಬಾಸ್.. ಡಿ ಬಾಸ್.. ನೋಡ್ಬೇಕು ಎಂಬ ಘೋಷಣೆ ಕೂಗುತ್ತಿದ್ದು, ಮಹಿಳೆಯರು, ಯುವತಿಯರು, ಯುವಕರ ದಂಡೆ ಜಮಾವಣೆಗೊಂಡಿದೆ. ಆದ್ರೆ ಗೆಸ್ಟ್ ಹೌಸ್ ನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಹೊರಗೆ ಬಂದಿಲ್ಲ.
ವರದಿ: ಶ್ರೇಯಾಂಕ ಕುಂದಗೋಳ. ನ್ಯೂಸ್90 ಕರ್ನಾಟಕ