ಚಿಕ್ಕಮಗಳೂರು: ಪಕ್ಷದ ಬಲವರ್ಧನೆಗಾಗಿ ಯಾಗಕ್ಕೆ ಮುಂದಾದ್ರ ಹೆಚ್ಡಿಡಿ..? ಹೌದು ಇಂತಹದೊಂದು ಪ್ರಶ್ನೆ ಹುಟ್ಟಿದ್ದು, ಮಾಜಿ ಪ್ರಧಾನಿ ಹೆಚ್ಡಿಡಿ ಕುಟುಂಬಸ್ಥರಿಂದ ಚಂಡಿ ಯಾಗ ನಡೆಯುತ್ತಿದೆ. ಶಾರದಾಂಬೆ ಸನ್ನಿಧಿಯಲ್ಲಿ ಇಂದಿನಿಂದ 5 ದಿನಗಳ ಕಾಲ ಹೋಮ ಹವನ ನಡೆಯುತ್ತಿದ್ದು, ನಿನ್ನೆಯೇ ಶೃಂಗೇರಿಗೆ ಆಗಮಿಸಿರುವ ಹೆಚ್ಡಿಡಿ ದಂಪತಿಗಳು ಇಂದು ಬೆಳಗ್ಗೆ ಗಣಪತಿ ಹೋಮದ ಮೂಲಕ ಯಾಗಕ್ಕೆ ಸಂಕಲ್ಪ ಮಾಡಿದರು. ಬರುವ ಮಂಗಳವಾರ ಯಾಗದ ಪೂರ್ಣಾಹುತಿ ಆಗಲಿದ್ದು 5ನೇ ದಿನ ಹೆಚ್ಡಿಡಿ ಕುಟುಂಬಸ್ಥರೆಲ್ಲರೂ ಈ ಪೂರ್ಣಹುತಿಯಲ್ಲಿ ಭಾಗಿಯಾಗಲಿದ್ದಾರೆ. ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಸಹಸ್ರ ಚಂಡಿಯಾಗ ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಚನ್ನಮ್ಮ ಅವರಿಂದ ಸಹಸ್ರ ಚಂಡಿಯಾಗಕ್ಕೆ ಸಂಕಲ್ಪ ಮಾಡಿದ್ರು. ಶಾರದಾಂಬೆ ದೇವಾಲಯದ ಯಾಗ ಮಂಟಪದಲ್ಲಿ ಈ ಯಾಗ ನಡೆಯುತ್ತಿದ್ದು, ಕುಟುಂಬದ ಶ್ರೇಯೋಭಿವೃದ್ದಿ ಹಾಗೂ ರಾಜಕೀಯ ಭವಿಷ್ಯಕ್ಕಾಗಿ ಯಾಗವನ್ನು ಮಾಡಿಸಲಾಗುತ್ತಿದೆ ಎನ್ನಲಾಗಿದೆ. ಇನ್ನು 10 ಋತ್ವಿಜಯರಿಂದ ಸಹಸ್ರ ಚಂಡಿಯಾಗ ನಡೆಯುತ್ತಿದ್ದು, ಮಂಗಳವಾರ ಪೂರ್ಣಾಹುತಿಯಲ್ಲಿ ಇಡಿ ಕುಟುಂಬ ಭಾಗಿಯಾಗಲಿದ್ದು, ಎಚ್.ಡಿ.ಡಿ. ದಂಪತಿಗಳು ಮಾತ್ರ ಈ ಐದು ದಿನಗಳು ಶೃಂಗೇರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.