ಮಡಿಕೇರಿ: ಕೊಡಗು ಅಂದ್ರೆನೆ ಅದೊದು ವಿಶೇಷ ಜಿಲ್ಲೆ. ಅಲ್ಲಿನ ಆಚಾರ ವಿಚಾರ ಸಂಸ್ಕೃತಿ ಎಲ್ಲವು ಇತರ ಜಿಲ್ಲೆಗೆ ಹೋಲಿಸಿಕೊಂಡ್ರೆ ವಿಭಿನ್ನ ಮತ್ತು ವಿಶೇಷ. ಇನ್ನೂ ಕೊಡಗಿನ್ನಲಿ ಕೋವಿ (ಬಂದೂಕು) ಎಲ್ಲರ ಮನೆ ಮನೆಯಲ್ಲೂ ಇರೋದು ಸಾಮಾನ್ಯ. ಅದಕ್ಕೆ ಇಲ್ಲಿ ವಿಶೇಷ ಸ್ಥಾನ ಮಾನ ಇದೆ. ಇಷ್ಟು ದಿನ ಮನೆಯಲ್ಲಿ ಇದ್ದ ಬಂದೂಕು ಇಂದು ಹೊರ ಬಂದಿದ್ದು ಯಾಕೆ? ತಂಡೊಪ ತಂಡವಾಗಿ ಈ ಮಂದಿ ಬಂದೂಕು ತಂದು ಗುಂಡು ಹಾರಿಸುತ್ತಿರೋದಾದ್ರು ಯಾಕೆ. ಈ ರೀತಿಯ ದೃಷ್ಯ ಕಂಡುಬಂದಿದಾದ್ರು ಎಲ್ಲಿ ಏನೀದು ಸ್ಟೋರಿ ಅಂತಿರಾ.. ಹಾಗಾದ್ರೆ ಮಿಸ್ ಮಾಡದೇ ಓದಿ ಆ ಕುರಿತ ಕಂಪ್ಲೀಟ್ ರಿಪೋರ್ಟ್.
ಕೊಡಗಿನಲ್ಲಿ ಮೊಳಗಿತ್ತು ಬಂದೂಕುಗಳ ಸದ್ದು… ಎದೆಗೆ ಒತ್ತಿ ಗುರಿ ನೋಡುತ್ತಿರೊ ಗುರಿಕಾರರು. ಪುರುಷರಿಗಿಂತ ನಾವೇನು ಕಮ್ಮಿಇಲ್ಲಾ ಅಂತ ಶೂಟ್ ಮಾಡುತ್ತಿರೊ ಮಹಿಳೆಯರು… ಒಂದೇ ಶಾಟ್ ಗೆ ಪಿಸ್ ಪಿಸ್ ಆದ ತೆಂಗಿನಕಾಯಿ… ಏನಪ್ಪ ಇದು ಅಂತ ಅಚ್ಚರಿ ಪಟ್ಟುಕೊಂಡ್ರ. ಇದು ಕೊಡಗಿನಲ್ಲಿ ನಡೆದ ಡಿಫ್ಫರೆಂಟ್ ಕಾಂಪಿಟಿಷನ್.. ಹೌದು.., ಹೀಗೊಂದು ದೃಷ್ಯ ಕಂಡುಬಂದಿದ್ದು ಕೊಡಗು ಜಿಲ್ಲೆ ಗೋಣಿಕೊಪ್ಪ ಸಮೀಪದ ಮಾಯಮುಡಿ ಗ್ರಾಮದಲ್ಲಿ. ಹಲವು ದಿನಗಳ ಬಳಿಕ ಕೊಡಗಿನಲ್ಲಿ ‘ತೋಕ್ ನಮ್ಮೆ’ ಹೆಸರಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಆದರೆ, ಇತ್ತೀಚಿನ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಕೊಡಗಿನ ಯುವ ಪ್ರತಿಭೆಗಳನ್ನು ಹೊರ ತರುವ ಉದ್ದೇಶದಿಂದ ಮಾಯಮುಡಿಯ ಯುವಕರ ತಂಡ ‘ತೋಕ್ ನಮ್ಮೆ’ಎಂಬ ವಿಶೇಷ ಸ್ಪರ್ಧೆ ಆಯೋಜಿಸಿದ್ದರು. ಸಾಮಾನ್ಯವಾಗಿ ಕೊಡಗಿನ ಪ್ರಮುಖ ಕೈಲ್ ಮೂಹೂರ್ತ ಹಬ್ಬದ ಸಂದರ್ಭಗಳಲ್ಲಿ ಊರ ಮಂದಿ ಎಲ್ಲಾ ಒಟ್ಟಾಗಿ ಸೇರಿ ಈ ರೀತಿಯ ಕಾರ್ಯಾಕ್ರಮ ಮಾಡ್ತಾರೆ. ಆದ್ರೆ ಈ ಭಾರಿ ಕೊರೊನಾದಿಂದಾಗಿ ಒಂದೆಡೆ ಸೇರಿ ಈ ರೀತಿಯ ಕಾರ್ಯಾಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ ಆದ್ರೆ ಇದೀಗ ಕೈಲ್ ಮೂಹೂರ್ತ ಹಬ್ಬದ ಬಳಿಕ ಈ ಶೂಟಿಂಗ್ ಕಾಂಪಿಟೇಷನ್ ಆಯೋಜನೆ ಮಾಡಲಾಗಿದೆ .ಹೌದು, ಕೈಯಲ್ಲಿ ಗನ್ ಹಿಡಿಯುವುದರ ಮಜಾನೇ ಬೇರೆ, ಹಾಗಾಗಿ ಈ ಸ್ಪರ್ಧೆಯಲ್ಲಿ ಕೊಡಗಿನ ಮಹಿಳೆಯರು ಕೂಡ ನಾವೇನು ಪುರುಷರಿಗಿಂತ ಕಮ್ಮಿ ಇಲ್ಲಾ ಅಂತ ಸಾಬೀತು ಮಾಡೋಕೆ ಗನ್ ಟ್ರಿಗ್ಗೆರ್ ಒತ್ತಿ ತೆಂಗಿನ ಕಾಯಿಯನ್ನ ಪೀಸ್ ಪೀಸ್ ಮಾಡಿದರು.
ಪುಟ್ಟ ಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು ಸೇರಿ 200 ಕ್ಕೂ ಹೆಚ್ಚು ಮಂದಿ 50 ಮೀ. ಅಂತರಲ್ಲಿನ ತೆಂಗಿನ ಕಾಯಿಗೆ ಗುರಿ ಇಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗುರಿಯನ್ನ ಪ್ರದರ್ಶನ ಮಾಡುತಿದ್ರು. ಇನ್ನು ಕೊರೊನಾದಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾರ್ಯಾಕ್ರಮಗಳು ನಡೆದಿರಲಿಲ್ಲಾ. ಹೀಗಾಗಿ, ಮನೆಯಲ್ಲೆ ಇದ್ದು ಇದ್ದು ಬೇಜಾರಾಗಿದ್ದ ಯುವಕರು ಕೂಡ ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಮಜಾ ಮಾಡಿದರು. ಒಟ್ಟಿನಲ್ಲಿ, ಬೇರೆ ಕಡೆ ಎತ್ತಿನ ಗಾಡಿ ಓಟ, ಕುಸ್ತಿ ಪಂದ್ಯಾಟ ಅಂತ ನಡೆದರೆ, ಕೊಡಗಿನಲ್ಲಿ ಬಂದೂಕುಗಳ ಸದ್ದು ಜೋರಾಗಿತ್ತು. ಇಷ್ಟು ದಿನಗಳ ಕಾಲ ತೋಟ, ಗದ್ದೆ , ಮನೆ ಕೆಲಸ ಅಂತಿದ್ದ ಕೊಡಗಿನ ಮಂದಿಗೆ ‘ತೋಕ್ ನೆಮ್ಮೆ’ ಸ್ವಲ್ಪ ರಿಲೀಫ್ ನೀಡಿತು. ಕೊರೊನಾ ಕೊರೊನಾ ಅಂತ ಕೇಳಿ ಕೇಳಿ ಸಾಕಾಗಿದ್ದ ಜನ್ರಿಗೆ ಬಂದೂಕು ಸೌಂಡ್ ಸಕ್ಕತ್ ಥ್ರಿಲ್ ಕೊಡ್ತು.