ಬೆಳಗಾವಿ: ಸರ್ಕಾರ ಬೀಳಿಸೋವಾಗ ಇದ್ದ ಪ್ರೀತಿ ಇಗಾ ಇಲ್ವಾ ಎಂಬ ಪ್ರಶ್ನೆಗೆ ಪರೋಕ್ಷವಾಗಿ ರಮೇಶ ಜಾರಕಿಹೊಳಿ ಆಂಡ್ ಟೀಂ ಕಾಲೆಳೆದಿರುವ ಸತೀಶ್ ಜಾರಕಿಹೊಳಿ ಸಹಜವಾಗಿಯೇ ಪ್ರೀತಿ ಕಡಿಮೆಯಾಗುತ್ತೆ, ಯಾವುದೇ ಒಂದು ವಸ್ತುವಿನ ಮೇಲೆ ಮೊದಲಿದ್ದ ಪ್ರೀತಿ ಬೇರೆ ಬೇರೆ ಕಾರಣಗಳಿಂದ ಕಡಿಮೆಯಾಗುತ್ತೇ, ಮೊದಲಿನ ಸ್ಪೀಡ್ ಕೊನೆಯವರೆಗೆ ಇರಲ್ಲ ಎಂದು ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಮಂತ್ರಿ ಮಂಡಲ ವಿಸ್ತರಣೆ, ಖಾತೆ ಹಂಚಿಕೆಯಾಗಿ ಕೆಲಸ ಶುರುವಾದರೆ ಸರಕಾರ ಟೆಕಾಫ್ ಆಗಿದೆಯಂತ ಹೇಳಬಹುದು ಆದ್ರೆ ಸಮಸ್ಯೆಗಳನ್ನು ಬಗೆ ಹರಿಸೋದ್ರಲ್ಲೆ ಬಿಜೆಪಿಯವ್ರು ಬ್ಯುಸಿಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನ ಹೊರ ಬಿದ್ದೆ ಬೀಳುತ್ತೆ, ಎಲ್ಲರಿಗೂ ಮಂತ್ರಿಗಿರಿ ಕೊಡೊಕಾಗಲ್ಲ. ಕತ್ತಿ, ಅಭಯ ಪಾಟೀಲ, ಆನಂದ ಮಾಮನಿ ಸೇರಿದಂತೆ ಅನೇಕರು ಕೇಳೆ ಕೇಳ್ತಾರೆ ಎಂದ್ರು. ಇನ್ನೂ ಸವದಿ ಎಂ.ಎಲ್.ಎ ಅಥವಾ ಎಂ.ಎಲ್.ಸಿ ಆಗಲೇಬೇಕು, ಅದು ಬಿಟ್ಟು ಬೇರೆ ದಾರಿ ಇಲ್ಲ. ಚುನಾವಣೆ ಕೂಡ ಘೋಷಣೆಯಾಗಬೇಕು, ಇನ್ನೂ ಒಂದೆರೆಡು ತಿಂಗಳು ಟೈಮ್ ಇದೆ ಎನ್ನುವ ಮೂಲಕ ಬಿಜೆಪಿಯಲ್ಲಿ ಎಲ್ಲವು ಸರಿಯಿಲ್ಲ ಎಂದಿದ್ದಾರೆ. ಈ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುತ್ತದೆ. ಎಲ್ಲರ ಅಭಿಪ್ರಾಯ ಪಡಿಯಲೇಬೇಕು ಹೀಗಾಗಿ ತಡವಾಗ್ತಿದೆ. ನಾನು ಯಾವುದೇ ಡಿಮ್ಯಾಂಡ್ ಮಾಡಿಲ್ಲ. ಪಕ್ಷ ಕೊಡೊ ಜವಾಬ್ದಾರಿ ಹಿಂದೆಯೂ ನಿಭಾಯಿಸಿದ್ದೇನೆ, ಮುಂದೆಯೂ ನಿಭಾಯಿಸ್ತೀನಿ ಎಂದ್ರು.