ಬೆಳಗಾವಿ: ಸಂಗೋಳ್ಳಿ ರಾಯಣ್ಣನ ಪುತ್ಥಳಿ ಪ್ರತಿಷ್ಠಾಪನಾ ವಿವಾದ ಬಗೆಹರಿಸಲು ನಾಲ್ಕು ದಿನದ ಹಿಂದೆ ಬೆಳಗಾವಿ ಭೇಟಿಗೆ ತೀರ್ಮಾನ ಮಾಡಿದ್ದೆ. ಆದ್ರೆ ಇಷ್ಟು ಸುಲಭವಾಗಿ ಮೂರ್ತಿ ವಿವಾದ ಇತ್ಯರ್ಥ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಶಿವಾಜಿ, ರಾಯಣ್ಣ ಮೂರ್ತಿ ವಿವಾದ ಇತ್ಯರ್ಥವಾಗಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯವಾದದ್ದು. ನಿನ್ನೆ ಆಗಿರೋ ತೀರ್ಮಾನ ರಾಷ್ಟ್ರ ಭಕ್ತರಿಗೆ ಸಂತೋಷ ತಂದಿದೆ. ರಾಯಣ್ಣ, ಶಿವಾಜಿ ಇಬ್ಬರು ಜಾತಿ, ಭಾಷೆಯನ್ನು ಮೀರಿದ್ದಾರೆ. ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ. ಈ ತೀರ್ಮಾನದಿಂದ ಎಲ್ಲರಿಗೂ ಸಂತೋಷವಾಗಿದೆ. ಗಲಾಟೆ ಸಂಬಂಧ ಮೂರು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಗೃಹ ಸಚಿವರ ಜತೆಗೆ ಚರ್ಚೆ ಮಾತನಾಡಿದ್ದು, ಪ್ರಕರಣ ವಾಪಸ್ ಪಡೆಯುವ ಬಗ್ಗೆ ಮಾತಕತೆ ಮಾಡಿದ್ದೇನೆ ಎಂದ ಅವರು ಈ ವಿಚಾರವನ್ನ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ
ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.