ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೇ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುತ್ತದೆ. ಈ ಮೂರೂ ಹೊಸ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 10 ಕ್ಕೆ ಏರಿದಂತಾಗಿದೆ. ಕೇಸ್ ನಂ: 128 ಯುವಕನ ತಂದೆ, ತಾಯಿ ಹಾಗೂ ಸಹೋದರನಿಗೂ ಕರೋನ ಪಾಸಿಟಿವ್ ಇರುವುದು ಧೃಡವಾಗಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಕೇಸ್ ನಂಬರ್: 128 ಸೇರಿ ಒಟ್ಟು ನಾಲ್ವರಿಗೆ ಕರೋನ ಪಾಸಿಟಿವ್ ಪತ್ತೆಯಾಗಿದ್ದು, ದೆಹಲಿಯ ನಿಜಾಮುದ್ದಿನ್ ಸಭೆಯಲ್ಲಿ ಕೇಸ್ ನಂಬರ್ 128 ಯುವಕ ಭಾಗಿಯಾಗಿದ್ದ. ಹೀಗಾಗಿ ಕೇಸ್ ನಂಬರ್ 128 ನಿಂದ ಆತನ ಸಂಪರ್ಕದಲ್ಲಿದ್ದ ಆತನ 50 ವರ್ಷದ ತಂದೆ P182, 40 ವರ್ಷದ ತಾಯಿ P192 ಹಾಗೂ 22 ವರ್ಷದ ಸಹೋದರ P193 ಗೆ ಕರೋನ ಸೋಂಕು ಪತ್ತೆಯಾಗಿದ್ದು, ಹಿರೆಬಾಗೇವಾಡಿ ಗ್ರಾಮದಲ್ಲಿ ಈಗಿದ್ದ ಆತಂಕ ಮತ್ತಷ್ಟು ಹೆಚ್ಚಿದೆ. ಇನ್ನು ಬೆಳಗಾವಿ ಜಿಲ್ಲಾಡಳಿತ ಈ ಮೂವರಿಗೂ ಸಂಪರ್ಕದಲ್ಲಿ ಇದ್ದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಾದ್ಯಂತ ಹೈಅಲರ್ಟ್ ಇದ್ದು, ಜಿಲ್ಲೆಯ ಜನರನ್ನ ಈ ಮಹಾಮಾರಿ ನಿದ್ದೆಗೆಡಿಸಿದೆ.