ಬೆಳಗಾವಿ: ಮಹಾಮಾರಿ ಕೊರೋನಾ ವೈರಸ್ ಇದೀಗ ಬೆಳಗಾವಿಗೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆಯ ಮೂರು ಜನರಿಗೆ ಕೊರೊನಾ ವೈರಸ್ ಸೋಂಕು ಇರುವುದು ವರದಿಯಿಂದ ದೃಢಪಟ್ಟಿದೆ. ದೆಹಲಿ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ 62 ಜನರ ಪೈಕಿ 33ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಈ ಪೈಕಿ ಮೂರು ಜನರಿಗೆ ಸೋಂಕು ದೃಢ ಪಡ್ಟಿದ್ದು, ಧಾರವಾಡದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಬೆಳಗಾವಿಯ ಮೂವರಲ್ಲಿ ಕೊರೋನಾ ಸೊಂಕು ಧೃಡಪಟ್ಟಿರೋ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಕುರಿತು ಬೆಳಗಾವಿ ಜಿಲ್ಲಾಡಳಿತಕ್ಕೆ ಸ್ಪಷ್ಟನೆ ಕೇಳಿದರೇ ಇನ್ನೂ ರಿಪೋರ್ಟ್ ಬಂದಿಲ್ಲಾ ಅನ್ನುವ ಉತ್ತರ ನೀಡುತ್ತಿದ್ದು, ಸಾಕಷ್ಟು ಗೊಂದಲಕ್ಕೆ ಎಡೆಮಾಡಿದೆ.