ಬೆಳಗಾವಿ: ಬಾವಿಯಲ್ಲಿ ಮುಳುಗಿ ತಂದೆ-ಮಗ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆದಿದೆ. ಈಜು ಬಾರದ ಮಗನಿಗೆ ಬಾವಿಯಲ್ಲಿ ಈಜು ಕಲಿಸುವಾಗ ಈ ಅವಘಡ ಸಂಭವಿಸಿದೆ.15 ವರ್ಷದ ಮಗ ಪರುಶರಾಮ ಕಮತಿ ಆತನ ತಂದೆ 70 ವರ್ಷದ ಸತ್ತೇಪ್ಪ ಕಮತಿ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ತೋಟದ ಬಾವಿಯಲ್ಲಿ ಮಗನಿಗೆ ಈಜು ಕಲಿಸಲು ತಮನದೆ ಸತ್ಯಪ್ಪ, ಮಗ ನೀರಿನಲ್ಲಿ ಮುಳುಗದಂತೆ ದಿಂಡಿ ಕಟ್ಟಿ ಬಾವಿಗೆ ಇಳಿಸಿದ್ದ. ಅದರ ಸಹಾಯದಿಂದ ಈಜು ಕಲಿಯುತ್ತಿರುವಾಗ ದಿಂಡಿ ಹರಿದಿದೆ. ದಿಂಡಿ ಹರಿದು ಮುಳುಗುತಿದ್ದ ಮಗನನ್ನು ರಕ್ಷಿಸಲು ತಂದೆ ಸತ್ಯಪ್ಪ ಬಾವಿಗೆ ಜಿಗಿದಿದ್ದಾನೆ. ಈ ವೇಳೆ ಭಯದಿಂದ ಮಗ ತಂದೆಯನ್ನು ಬಿಗಿಯಾಗಿ ಹಿಡಿದಿದ್ದರಿಂದ ತಂದೆ ಈಜಲಾಗದೇ ಇಬ್ಬರೂ ನೀರುಪಾಲಾಗಿದ್ದಾರೆ. ಇನ್ನು ಘಟನೆಯನ್ನು ಕಣ್ಣಾರೆ ಕಂಡ ದಡದಲ್ಲಿ ಕುಳಿತ ಕಿರಿಯ ಮಗ ಜನರನ್ನು ಕೂಗಿ ಕರೆಯುವಷ್ಟರಲ್ಲಿ ತಂದೆ-ಮಗ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಭಸ್ಥರ ಆಕ್ರಂಧನ ಮುಗಿಲು ಮುಟ್ಟದ್ದು, ಘಟಪ್ರಭಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.