ಕೂಗು ನಿಮ್ಮದು ಧ್ವನಿ ನಮ್ಮದು

ಬಾಗಲಕೋಟೆ: ಪ್ರೀತಿಯಲ್ಲಿ ಕೈಕೊಟ್ಟ ಯುವತಿ | ಯುವಕ ನೇಣಿಗೆ ಶರಣು

ಬಾಗಲಕೋಟೆ: ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆ ಮನನೊಂದ ಯುವಕನೊಬ್ಬ ವಿದ್ಯುತ್ ಕಂಬದ ಆ್ಯಂಗಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. 18 ವರ್ಷದ ಚಂದ್ರಶೇಖರ ಮಾದರ ನೇಣಿಗೆ ಶಾರಣಾದ ಯುವಕ. ಮೃತ ಚಂದ್ರಶೇಖರ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ತುರಡಗಿ ಗ್ರಾಮದವನು. ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆಯಲ್ಲಿ ಡೆಥ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆಂದು ಹೇಳಲಾಗ್ತಿದೆ. ಇನ್ನು ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದ್ತಿದ್ದ ಅಂತಾ ತಿಳಿದುಬಂದಿದೆ. ಮೃತ ಯುವಕನದ್ದು ಬಡಕುಟುಂಬ. ಹಾಗಾಗಿ ಆತನ ತಂದೆ-ತಾಯಿ ದುಡಿಯೋದಕ್ಕಾಗಿ ಗೋವಾಕ್ಕೆ ಗುಳೆ ಹೋಗಿದ್ದಾರೆ. ಆದ್ರೆ ಇಲ್ಲಿ ಮಗ ಪ್ರೀತಿ, ಪ್ರೇಮ ಅಂತ ಜೀವ ಕಳೆದುಕೊಂಡಿದ್ದಾನೆ. ಸದ್ಯ ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ತಂದೆ-ತಾಯಿ ಗೋವಾದಿಂದ ಬರ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!