ಕೂಗು ನಿಮ್ಮದು ಧ್ವನಿ ನಮ್ಮದು

ದೆಹಲಿ ದ್ವಾರಕಾ ಸ್ಮಶಾನದಲ್ಲಿ ದಿ.ಸುರೇಶ್ ಅಂಗಡಿ ಸ್ಮಾರಕಕ್ಕೆ ಕ್ರಮ: ಸಿಎಂ ಯಡಿಯೂರಪ್ಪ

ಬೆಳಗಾವಿ: ಬೆಳಗಾವಿಗೆ ಸಿಎಂ ಬಿ ಎಸ್ ಯಡಿಯೂರಪ್ಪ ಆಗಮಿಸಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನಕ್ಕೆ ಬಂದಿಳಿದ ಸಿಎಂಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಾಥ್ ನೀಡಿದ್ದಾರೆ. ಇನ್ನು ಸಿಎಂ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ನಂತರ ಅಲ್ಲಿಂದ ದಿವಂಗ ಸುರೇಶ ಅಂಗಡಿ ನಿವಾಸಕ್ಕೆ ಭೇಟಿ ನೀಡಲು ತರಳಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಲಿರುವ ಸಿಎಂ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸುರೇಶ ಅಂಗಡಿ ನನ್ನ ಆತ್ಮೀಯ ಸ್ನೇಹಿತ. ಅವರು ಇಲ್ಲ ಅನ್ನೋದು ಕಲ್ಪನೆ ಮಾಡಲು ಸಾಧ್ಯವಿಲ್ಲ. ನಾಲ್ಕು ಭಾರಿ ಸಂಸದರಾಗಿ, ರೈಲ್ವೆ ಸಚಿವರಾಗಿ ಅನೇಕ ಕೆಲಸ ಮಾಡಿದ್ದಾರೆ. ಅವರು ಕೊರೊನಾ ದಾಳಿಗೆ ಸಿಲುಕಿ ಮೃತಟ್ಟಿದ್ದಾರೆ. ಜ್ವರ ಬಂದ್ರು ನಿರ್ಲಕ್ಷ್ಯ ಮಾಡಿ ದೆಹಲಿಗೆ ಹೋಗಿದ್ರು. ದೆಹಲಿಗೆ ಹೋಗಿ ಎರಡು ದಿನ ತಡ ಮಾಡಿದ್ರು‌. ಏನು ಆಗಿಲ್ಲ ಅನ್ನೋ ಭ್ರಯೆಯಲ್ಲಿ ಸುರೇಶ್ ಅಂಗಡಿ ಇದ್ದರು. ಹೀಗಾಗಿ ಅವರು ಬಂಧುಗಳನ್ನ ಅಗಲಿದ್ದಾರೆ. ಈಗ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ. ದೆಹಲಿ ದ್ವಾರಕ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. ಅಲ್ಲಿ ಅಂಗಡಿ ಅವರ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವು. ಈಗಾಗಲೇ ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

error: Content is protected !!