ಬೆಳಗಾವಿ: ದೆಹಲಿ ತಬ್ಲಿಘಿ ಜಮಾತ ಸಂಪರ್ಕಕ್ಕೆ ಬೆಳಗಾವಿ ಜಿಲ್ಲೆ ಬೆಚ್ಚಿಬಿದ್ದಿದೆ. ಇದರಿಂದ ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬೆಳಗಾವಿಯಲ್ಲಿ ನಾಲ್ಕು ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಇಂದು ಹೊಸದಾಗಿ ಪಾಸಿಟಿವ್ ಬಂದ ಪೆಶೆಂಟ್ ನಂ 223, 225, 226 ರಾಯಬಾಗ ತಾಲೂಕಿನ ಕುಡಚಿ ನಿವಾಸಿಗಳಾಗಿದ್ದಾರೆ. ಈ ಮೂವರಿಗೂ ದೆಹಲಿಯ ತಬ್ಲಿಘಿ ಜಮಾತನಲ್ಲಿ ಭಾಗವಹಿಸಿದ್ದ ಪೆಶೆಂಟ್ ನಂ 150 ರ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲೇ ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಹೀಗಾಗಿ
ರಾಯಬಾಗ ತಾಲೂಕಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಪೆಶೆಂಟ್ ನಂ 224 ಹಿರೇಬಾಗೇವಾಡಿಯ 38 ವರ್ಷದ ವ್ಯಕ್ತಿಯಾಗಿದ್ದು,
ಈತನಿಗೆ ದೆಹಲಿಯ ತಬ್ಲಿಘಿ ಜಮಾತನಲ್ಲಿ ಭಾಗವಹಿಸಿದ್ದ ಪೆಶೆಂಟ್ ನಂ 128 ರ ಸಂಪರ್ಕವಾಗಿದೆ.
ಈ ಪ್ರಕರಣದಿಂದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆಯಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.
ಎಲ್ಲ ಸೋಂಕಿತರಿಗೂ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲರಿಗೂ ನಿಜಾಮುದ್ದಿನ್ ತಬ್ಲಿಘಿ ಜಮಾತ ಸಂಪರ್ಕವಿರುವುದು ಆತಂಕಕ್ಕೆ ಕಾರಣವಾಗಿದೆ.