ಕೂಗು ನಿಮ್ಮದು ಧ್ವನಿ ನಮ್ಮದು

ಡ್ರಗ್ ಮುಕ್ತ ಕರ್ನಾಟಕಕ್ಕೆ ಪಣ, ಯಾವ ರಾಗಿಣಿ ಇರಲಿ ಪಾಗಿಣಿ ಇರಲಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಡಿಸಿಎಂ ಲಕ್ಷಣ ಸವದಿ

ಬೆಳಗಾವಿ: ಯಾವ ರಾಗಿಣಿ ಇರಲಿ ಪಾಗಿಣಿ ಇರಲಿ ನಮಗೇನು ಸಂಬಂಧವಿಲ್ಲ. ಉಮೇಶ ಕತ್ತಿ ನನ್ನ ಸ್ನೇಹಿತ ಅವರು ಸಂಪುಟಕ್ಕೆ ಸೇರಬೇಕು ಎಂಬುದು ನನ್ನ ಬಯಕೆ. ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿದ್ದವರು ಈಗಾಗಲೇ ಜೈಲಿಗೆ ಹೋಗಿದ್ದಾರೆ. ಯಾರು ತಪ್ಪತಸ್ಥರಿದ್ದಾರೆ ಅವರಿಗೆ ಶಿಕ್ಷೆಯಾಗಲಿದೆ. ನಟ-ನಟಿಯರು ಚುನಾವಣೆಯಲ್ಲಿ ಪ್ರಚಾರಕ್ಕೆ ಬರೋದು ಸ್ವಾಭಾವಿಕ. ಡ್ರಗ್ ಮಾಫಿಯಾದಲ್ಲಿ ತನಿಖೆಗೆ ಒಳಪಟ್ಟವರ ಫೋಟೊ ಡಿ.ಕೆ.ಶಿವಕುಮಾರ್,‌ ಸಿದ್ದರಾಮಯ್ಯ ಜೊತೆಗೂ ಇದೆ. ಹಾಗಂತ ಅವರು ಡ್ರಗ್ಸ್ ಮಾಫಿಯಾದಲ್ಲಿ ಇದ್ದಾರೆಂದು ನಮಗೂ ಗೊತ್ತಿರಲಿಲ್ಲ ಅವರಿಗೂ ಗೊತ್ತಿರಲಿಲ್ಲ ಎಂದಿರುವ ಡಿಸಿಎಂ ಸವದಿ ಸಮ್ಮಿಶ್ರ ಸರಕಾರ ಪತನಕ್ಕೆ ಡ್ರಗ್ ಮಾಫಿಯಾ ಕಾರಣ ಎಂಬ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಲಕ್ಷಣ ಸವದಿ ವ್ಯಂಗ್ಯವಾಡಿದ್ದಾರೆ. ಕುಣಿಯೋಕೆ ಬರಲ್ಲಿಲ್ಲ ಅಂದ್ರೆ ನೆಲ ಡೊಂಕು‌ ಅಂದಂಗಾಗಿದೆ. ಇಷ್ಟು ದಿನ ಯಾಕ ಬಾಯಿ ಮುಚ್ಚಿಕೊಂಡು ಇದ್ರು. ಕುಮಾರಸ್ವಾಮಿ ಮಾತು ಕೇಳಿದ್ರೆ ನಗು ಬರುತ್ತೆ. ಡ್ರಗ್ ಮಾಫಿಯಾದಿಂದ ಅವರ ಸರಕಾರ ಬಿದ್ದಿದೆಯಂದ್ರೆ ಅಂದು ಅವರು ಮುಖ್ಯಮಂತ್ರಿಯಾಗಿರಲಿಕ್ಕೆ ಅಸಮರ್ಥರು ಎಂದಾಯಿತು. ಆಗ ಕುಮಾರಸ್ವಾಮಿ ಬಳಿ ಗೃಹ ಇಲಾಖೆ, ಇಂಟೆಲಿಜೆನ್ಸ್ ಇತ್ತು. ಅವರ ಅಧಿಕಾರದ ವೈಫಲ್ಯದಿಂದಲೇ ಸಮ್ಮಿಶ್ರ ಸರ್ಕಾರ ಬಿದ್ದಿದೆ ಹೊರತು, ಇದು ಜೀಜಬಿ ಅಂತಹುದು. ಇಂತಹುದರಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಿಲ್ಲ ಅಂದ್ರು.

ಇನ್ನು ಡ್ರಗ್ ಮಾಫಿಯಾದಲ್ಲಿ ಯಾವ ರಾಜಕಾರಣಿಗಳೇ ಇರಲಿ, ಅಧಿಕಾರಿಗಳೇ ಇರಲಿ ಎಂಥ ಪ್ರಭಾವಿಗಳಿರಲಿ ಅವರನ್ನ ಮಟ್ಟಹಾಕಿ ಹೆಡೆಮುರಿ ಕಟ್ಟುವ ಕೆಲಸವನ್ನು ಗೃಹ ಇಲಾಖೆ ಮಾಡಲಿದೆ. ಡ್ರಗ್ ಮಾಫಿಯಾ ಹತ್ತಿಕ್ಕಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಸ‌ಕಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದಿರುವ ಸವದಿ, ಡ್ರಗ್ಸ್ ತನಿಖೆಯಲ್ಲಿ ಎಷ್ಟೇ ಬಲಾಡ್ಯರಿದ್ದರು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾಯತ್ತತೆ ಕೊಡಲಾಗಿದೆ. ಗೃಹ ಸಚಿವರು ಈ ಕುರಿತು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಯಾರಿಗೂ ಸಂಶಯ ಬೇಡ ಎಂದ್ರು. ಇದೇ ವೇಳೆ ಮಾತನಾಡುತ್ತ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಂದಾಗ ಅವರನ್ನೆ ಕೇಳಿ. ಉಮೇಶ ಕತ್ತಿ‌ ನನ್ನ ಸ್ನೇಹಿತ ಅವರು ಸಂಪುಟ ಸೇರಿದ್ರೆ ಒಳ್ಳೆಯದು ಎಂದು ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ ನಲ್ಲಿ ಡಿಸಿಎಂ ಲಕ್ಷಣ ಸವದಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

error: Content is protected !!