ಚಿತ್ರದುರ್ಗ: ಚಾಲಕ ರಹಿತ ಡ್ರೋಣ್ ರುಸ್ತುಂ -2 ಪ್ರಯೋಗಾರ್ಥ ಹಾರಾಟ ಕೊನೆಗೂ ಯಶಸ್ವಿಯಾಗಿದೆ. ಈ ಮೂಲಕ ದೇಶದ ವಾಯು ಪಡೆಗೆ ಮತ್ತಷ್ಟು ಶಕ್ತಿ ತುಂಬಲಿರುವ ರುಸ್ತುಂ-2 DRDO ಪ್ರದೇಶದ ಏರೋ ನಾಟಿಕ್ ಟೆಸ್ಟ್ ರೇಂಜ್ ನಲ್ಲಿ ಹಾರಾಟ ನಡೆಸಿ ಭಾರತೀಯರ ಹೆಮ್ಮೆಗೆ ಪಾತ್ರವಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರದ DRDO ದಲ್ಲಿ ನಡೆದ ಪ್ರಯೋಗ ಯಶಸ್ವಿಯಾಗಿದ್ದು, ಐತಿಹಾಸಿಕ ಕ್ಷಣವಾಗಿದೆ. ಸತತ ಎಂಟು ಗಂಟೆ ಕಾಲ 40 ಕಿಮೀ ವ್ಯಾಪ್ತಿಯಲ್ಲಿ ಹಾರಾಟ ನಡೆಸಿದ ರುಸ್ತುಂ-2 ಬರೊಬ್ಬರಿ 16 ಸಾವಿರ ಅಡಿ ಎತ್ತರದಲ್ಲಿ ಸತತ ಹಾರಾಟ ನಡೆಸಿತು. ರುಸ್ತುಂ-2 ಡ್ರೋನ್ ಭಾರತ ದೇಶದ ಹೆಮ್ಮೆಯ ಚಾಲಕ ರಹಿತ ವಿಮಾನವಾಗಿದೆ.
ಇನ್ನು ಈ ಹಿಂದೆ ಕೂಡ ರುಸ್ತುಂ-02 ಪ್ರಾಯೋಗಿಕ ಹಾರಾಟ ನಡೆಸಲಾಗಿತ್ತು ಆದ್ರೆ ಅದು ಯಶಸ್ವಿಯಾಗಿರಲಿಲ್ಲ. 2019 ಸೆಪ್ಟೆಂಬರ್ 17 ರಂದು ರುಸ್ತುಂ-2 ಪ್ರಾಯೋಗಿಕ ಹಾರಟದ ವೇಳೆ ಪತನವಾಗಿತ್ತು. ಆದ್ರೆ ಈಗ ರುಸ್ತುಂ-02 ಯಶಸ್ವಿ ಹಾರಾಟ ನಡೆಸಿ ಅಲ್ಲಿನ ಸಿಬ್ಬಂದಿಗಳಿಗೆ ಹುಮ್ಮಸ್ಸು ತುಂಬಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಹಲವರು ಸಾಕ್ಷಿಯಾಗಿದ್ದು, ಎಲ್ಲರೂ ಈ ಮನಮೋಹಕ ದೃಶವನ್ನು ಕಣ್ತುಂಬಿಕೊಂಡರು.