ಕೂಗು ನಿಮ್ಮದು ಧ್ವನಿ ನಮ್ಮದು

ಗ್ಯಾಸ್ ಸಿಲೆಂಡರ್ ಗಳನ್ನು ವಿತರಿಸಿದ ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ: ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಅನಿಲ ಭಾಗ್ಯ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲೆಂಡರ್ ಗಳನ್ನು ವಿತರಿಸಿದರು. ಕಳೆದ 3 ದಿನಗಳಿಂದ ವಿವಿಧ ಗ್ರಾಮಗಳಿಗೆ ತೆರಳಿ ಗ್ಯಾಸ್ ಸೆಲೆಂಡರ್ ವಿತರಿಸುತ್ತಿರುವ ಶಾಸಕರು, ಮಂಗಳವಾರ ಹಿರೇಕೋಡಿ ಗ್ರಾಮದಲ್ಲಿ ಸಿಲೆಂಡರ್ ವಿತರಣೆ ಮಾಡಿದರು. ಕಳೆದ 3 ದಿನಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಅವರು ಸಿಲೆಂಡರ್ ಗಳನ್ನು ವಿತರಿಸಿದರು. ಸರಕಾರದ ವಿವಿಧ ಯೋಜನೆಗಳನ್ನು ಕ್ಷೇತ್ರದ ಬಡವರಿಗೆ ಸರಿಯಾದ ರೀತಿಯಲ್ಲಿ ತಲುಪಿಸಲಾಗುತ್ತಿದೆ. ಜನರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಗಣೇಶ ಹುಕ್ಕೇರಿ ಈ ಸಂದರ್ಭದಲ್ಲಿ ಜನರಿಗೆ ಕರೆ ನೀಡಿದರು.

error: Content is protected !!