ಕೂಗು ನಿಮ್ಮದು ಧ್ವನಿ ನಮ್ಮದು

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಅಂಜನಾದ್ರಿ ಬೆಟ್ಟಕ್ಕೆ ಹೊರಟವ್ರು ಮಸಣ ಸೇರಿದ್ರು

ವಿಜಯಪುರ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡೂ ಬೈಕ್ ಗಳು ಹೊತ್ತಿ ಉರಿದು, ಇಬ್ಬರು ಸವಾರರು ಸ್ಥಳದಲ್ಲೆ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಬಳಿ ನಡೆದಿದೆ. ಬೈಕ್ ಮೇಲಿದ್ದ ಮತ್ತಿಬ್ಬರು ಸವಾರರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಅಪ್ಜಲಪುರದಿಂದ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ಸವಾರಿ ಹೊರಟಿದ್ದ ಯುವಕರು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಕುಮಾರ್ (22) ಸಾವಿಗೀಡಾದ ಬೈಕ್ ಸವಾರನಾಗುದ್ದು, ಇನ್ನೊಬ್ಬನ ಹೆಸರು ಪತ್ತೆಯಾಗಿಲ್ಲ. ಇಂದು ಶನಿವಾರ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯ ದರ್ಶನಕ್ಕೆ ನಿನ್ನೆಯೇ ಬೈಕ್ ಮೇಲೆ ಹೊರಟಿದ್ದರು ಎನ್ನಲಾಗಿದ್ದು, ನಡುದಾರಿಯಲ್ಲೆ ದಾರುಣ ಸಾವು ಕಂಡಿದ್ದಾರೆ. ಇನ್ನು ಪ್ರಕರಣ ಸಂಬಂಧ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!