ಬೆಳಗಾವಿ: ರಾಜಕೀಯ ನಾಯಕರು ಅಂದ್ರೆ ಅವರಿಗೆ ಅಭಿಮಾನಿಗಳ ಪಡೆ ಇರೋದು ಸರ್ವೆ ಸಾಮಾನ್ಯ. ತಮ್ಮ ನೆಚ್ಚಿನ ನಾಯಕನಿಗಾಗಿ ಹಲವು ಬಗೆಯ ಕಸರತ್ತಗಳನ್ನು ಮಾಡಿ ತಮ್ಮ ಅಭಿಮಾನ ಹೊರ ಹಾಕುವ ಅದೇಷ್ಟೋ ಹುಚ್ಚು ಅಭಿಮಾನಿಗಳನ್ನು ನಾವೆಲ್ಲಾ ಕಂಡಿದಿವಿ. ಇಂತಹ ಹುಚ್ಚು ಅಭಿಮಾನಿಗಳ ಸಾಲಿಗೆ ಇವತ್ತು ಮತ್ತೊಬ್ಬ ಯುವಕ ಸೇರ್ಪಡೆಗೊಂಡಿದ್ದಾನೆ. ಹೌದು.. ಇಲ್ಲೋಬ್ಬ ಅಭಿಮಾನಿ ತನ್ನ ಎದೆಯ ಮೇಲೆ ಸಚಿವ ಲಕ್ಷ್ಮಣ ಸವದಿಯವರ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡು ಹಚ್ಚೆಯಲ್ಲೇ ”ಸಾಹುಕಾರ” ಎಂದು ಬರೆಯಿಸಿಕೊಂಡು ಸುದ್ದಿಯಾಗಿದ್ದಾನೆ. ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರ ಪಕ್ಕಾ ಅಭಿಮಾನಿ ಈತ. ಹೀಗೆ ತನ್ನ ಎದೆಯ ಮೇಲೆ ಡಿಸಿಎಂ ಲಕ್ಷ್ಮಣ ಸವದಿಯವರ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿರುವ ಈ ಹುಚ್ಚು ಅಭಿಮಾನಿ ಹೆಸರು “ನಾಗರಾಜ ವಡಕಣ್ಣವರ್” ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಪಶುಪತಿಹಾಳ ಗ್ರಾಮದವ.
ಈತನಿಗೆ ಮೊದಲಿನಿಂದಲೂ ಲಕ್ಷ್ಮಣ ಸವದಿ ಅಂದ್ರೆ ಅಪ್ಪಟ ಪ್ರೀತಿ. ಅದೇ ಪ್ರೀತಿಯ ಅಭಿಮಾನ ಇದೀಗ ತನ್ನ ನೆಚ್ಚಿನ ನಾಯಕನಿಗೆ ಈ ಯುವಕ ಎದೆಯ ಮೇಲೆ ಅವರ ಹಚ್ಚೆ ಹಾಕಿಸಿಕೊಂಡು ಅಭಿಮಾನ ತೋರಿಸಿದ್ದಾನೆ. ಈತ ಹಾಕಿಸಿರುವ ಲಕ್ಷ್ಮಣ ಸವದಿಯವರ ಈ ಹಚ್ಚೆ ಗುರುತು ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಾಯಕರು ಚುನಾವಣೆಗೆ ಸ್ಪರ್ದಿಸಿ ಗೆಲುವು ಸಾದಿಸಲಿ, ಅಥವಾ ಗೆದ್ದು ಬಂದ ಮೇಲೆ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಹಲವು ಜನ ಅಭಿಮಾನಿಗಳು ತಮ್ಮ ಇಷ್ಟ ದೇವರಿಗೆ ಹೋಗಿ ದೀರ್ಘದಂಡ ನಮಸ್ಕಾರ, ಉರುಳು ಸೇವೆ, ತೆಂಗಿನಕಾಯಿ ಒಡೆಸುವುದು ಸೇರಿದಂತೆ ನಾನಾ ಬಗೆಯ ಹರಕೆ ಹೊತ್ತುಕೊಳ್ಳುವುದನ್ನು ನಾವು ಕೇಳಿದ್ದೇವೆ. ಅಷ್ಟೇ ಅಲ್ಲ ತಮ್ಮ ನಾಯಕರುಗಳ ಪ್ಲೆಕ್ಸ್, ಬ್ಯಾನರ್ ಹಾಕುವುದು ಕೂಡ ಸಾಮಾನ್ಯ. ಅಂತದ್ದರಲ್ಲಿ ಈ ನಾಗರಾಜನ ಹಚ್ಚೆ ಪ್ರೀತಿ ಎಲ್ಲರ ಗಮನ ಸೇಳೆದಿದೆ.