ಕೂಗು ನಿಮ್ಮದು ಧ್ವನಿ ನಮ್ಮದು

ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ನೀರು : ದಿಡೀರ್ ಕುಸಿತ ಕಂಡ ಈರುಳ್ಳಿ ಬೆಲೆಯಿಂದ ಕಂಗಾಲಾದ ಅನ್ನದಾತ

ಕೋಲಾರ: ರೈತರ ಬದುಕೇ ಈಗ ದುಸ್ತರ. ಯಾವುದೇ ಸಮಸ್ಯೆ ಆದ್ರೂ ಅದು ರೈತರಿಗೆ ಸಮಸ್ಯೆ ಆಗಿ ಕಾಡುತ್ತೆ. ಇದಕ್ಕೆ ಸ್ಫಷ್ಟ ಉದಾಹರಣೆ ಈರುಳ್ಳಿ ಸಮಸ್ಯೆ. ಲಕ್ಷಾಂತರ ರೂಪಾಯಿ ತೊಡಗಿಸಿ ಬೆಳೆ ಬೆಳೆಸುತ್ತಾರೆ. ಆದ್ರೆ ಬೆಳೆಗಳಿಗೆ ಬೆಲೆ ಸಿಗದೆ ಕಂಗಾಲಾಗುತ್ತಾರೆ. ಬೆಲೆ ಸಿಕ್ಕಿದ್ರೆ ಅತ್ತ ಅತೀವೃಷ್ಟಿ ಅಥವಾ ಅನಾವೃಷ್ಟಿ.. ಇದು ರೈತರಲ್ಲಿ ಸಾಮಾನ್ಯ ವಿಚಾರಗಳಾಗಿ ಹೋಗಿದೆ. ಅಷ್ಟಕ್ಕು ಈಗೇನಾಯ್ತು ಅಂತಿರಾ ಈ ಸ್ಟೋರಿ‌ ಪೂರ್ತಿ ಓದಿ.

ಅಡುಗೆಯಲ್ಲಿ ಈರುಳ್ಳಿಯ ರುಚಿಯೇ ಬೇರೆ. ನಮ್ಮ ದೇಶದಲ್ಲಿ ಮಹಾರಾಷ್ಟ್ರ, ಆಂದ್ರ, ತೆಲಂಗಾಣ, ಒಡಿಶ್ಶಾ ರಾಜ್ಯಗಳಲ್ಲಿ ಸೇರಿದಂತೆ ನಮ್ಮ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬೆಳೆಯುತ್ತಾರೆ. ಸುಮಾರು ಇಪ್ಪತ್ತು ಮಾದರಿಯ ಈರುಳ್ಳಿಯ ತಳಿಗಳಿವೆ. ಆ ತಳಿಗಳಲ್ಲಿ ರೋಸ್ ಈರುಳ್ಳಿ ಕೂಡ ಒಂದು. ಈ ತಳಿ ಮಾದರಿಯನ್ನು ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಅದರಲ್ಲು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಕೋಲಾರದ ಮಾರುಕಟ್ಟೆಯಲ್ಲಿ ಈ ಈರುಳ್ಳಿಯ ವಹಿವಾಟು ಸಾಕಷ್ಟು ನಡೆಯುತ್ತದೆ. ಆದ್ರೀಗ ಈ ಈರುಳ್ಳಿಗೆ ಏಕಾಏಕಿ ಬೆಲೆ ತೀವೃವಾಗಿ ಕುಸಿತ ಕಂಡಿದ್ದು ರೈತರು ಮತ್ತು ವರ್ತಕರಿಗೆ ತೀವೃ ನಷ್ಟ ಉಂಟಾಗಿದೆ. ಅಷ್ಟಕ್ಕು ಈ ಬೆಲೆ ಕುಸಿತಕ್ಕೆ ಕಾರಣ ಏನು ಎಂದು ಹುಡುಕಿದ್ರೆ ಅದು ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ.

ಹೌದು.. ಅಗತ್ಯ ವಸ್ತುಗಳ ರಫ್ತು ನಿಷೇಧ ಮಾಡಿರುವ ಕೇಂದ್ರ ಸರ್ಕಾರ ಆ ಪಟ್ಟಿಯಲ್ಲಿ ಈರುಳ್ಳಿಯನ್ನು ಸೇರಿಸಿದೆ. ಇದ್ರಿಂದಾಗಿ ಬಾಂಗ್ಲಾ, ಶ್ರೀಲಂಕಾಗಳಿಗೆ ರಫ್ತು ಆಗುತ್ತಿದ್ದ ಈರುಳ್ಳಿಗೆ ಈಗ ಕೇಳುವರಿಲ್ಲ. ಬೆಲೆ ಸಾಮಾನ್ಯವಾಗಿ ಕನಿಷ್ಟವೆಂದರೂ 25 ರೂಪಾಯಿಂದ 50 ರೂಪಾಯಿ ವರೆಗೆ ಮಾರುಕಟ್ಟೆಯಲ್ಲಿರುತ್ತೆ. ಉತ್ತಮ ಗುಣಮಟ್ಟದ ಈರುಳ್ಳಿಗೆ 90 ರಿಂದ 100 ರೂಪಾಯಿವರೆಗೂ ಬೆಲೆ ಸಿಗುತಿತ್ತು. ಆದ್ರೆ ಈಗ ಈರುಳ್ಳಿ ರಫ್ತು ನಿಷೇಧದಿಂದಾಗಿ ನಮ್ಮ ದೇಶಿಯ ತಳಿಯಾದ ರೋಸ್ ಈರುಳ್ಳಿಗೆ ಬೆಲೆಯೇ ಇಲ್ಲ. ಕೇವಲ 10 ರೂಪಾಯಿಗೆ ಕೇಳುವರಿಲ್ಲ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಎನ್ನುವ ಗಾದೆಯ ರೀತಿಯಾಗಿದೆ ನಮ್ಮ ರೈತರ ಸ್ಥಿತಿ. ಅಗತ್ಯ ವಸ್ತುಗಳ ಬೆಲೆ ಏರಬಾರುದು ಎನ್ನುವ ದೃಷ್ಟಿಯಲ್ಲಿ ಸರ್ಕಾರ ಕೆಲವು ವಸ್ತುಗಳ ರಫ್ತು ನಿಷೇಧಿಸಿದೆ. ಆದ್ರೆ ಈ ರೋಸ್ ಈರುಳ್ಳಿ ರಫ್ತು ನಿಷೇಧದಿಂದಾಗಿ ಕೊನೆಗೆ ಕಷ್ಟ ಅನುಭವಿಸುತ್ತಿರೋದು ನಮ್ ರೈತರೆ. ಸಂಬಂಧಿಸಿದವರು ಈಗಲಾದ್ರು ಇದರ ಬಗ್ಗೆ ಗಮನಹರಿಸಲಿ ಅನ್ನೋದು ನ್ಯೂಸ್90 ಕರ್ನಾಟಕದ ಕಳಕಳಿ.

error: Content is protected !!