ರಾಮನಗರ: ಅವರಿಬ್ಬರು ಪ್ರೀತಿ ಪ್ರೇಮದ ಅಮಲಿನಲ್ಲಿ ಪರಸ್ಪರ ಮೂರು ವರ್ಷಗಳಿಂದ ತೇಲಿ ಹೋಗಿದ್ರು. ಆಕಾಶಕ್ಕೆ ಮೂರೇ ಗೇಣು. ನಮ್ಮನ್ನ ತಡೆಯೋರು ಯಾರು ಇಲ್ಲಾ ಅಂತಾ ಆರಾಮಾಗಿ ಇದ್ರು ಆ ಅನ್ಯ ಕೋಮಿನ ಪ್ರೇಮಿಗಳು. ಇನ್ನೇನು ಮನೆಯಲ್ಲಿ ಒಪ್ಪಿಕೊಂಡ್ರು, ಮದ್ವೆ ಆಗ್ತೀವಿ ಅಂದು ಕೊಂಡಿದ್ರು ಈ ಪ್ರೇಮಿಗಳು. ಆದ್ರೆ ಆ ಅನ್ಯ ಕೋಮಿನ ಯುವತಿಯನ್ನು ಪ್ರೀತಿ ಮಾಡಿದಕ್ಕೆ ಇವತ್ತು ಆ ಯುವಕ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಅಷ್ಟಕ್ಕೂ ಏನಾಯ್ತು ಅಂತೀರಾ..ಈ ಸ್ಟೋರಿ ಕಂಪ್ಲೀಟ್ ಓದಿ.
ಹೌದು… ಅವರಿಬ್ಬರೂ ಅನ್ಯ ಕೋಮಿನ ಪ್ರೇಮಿಗಳು. ಅಕ್ಕ ಪಕ್ಕದ ಊರಿವರಾದರೂ ಒಂದೇ ಗ್ರರ್ಮೇಂಟ್ಸ್ನಲ್ಲಿ ಕೆಲಸ ಮಾಡ್ತಿದ್ರು. ಕೆಲಸ ಮಾಡುವ ವೇಳೆ ಪರಿಚಯವಾಯ್ತು. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿ ಆಯ್ತು. ಪ್ರೀತಿಗೆ ಜಾತಿ ಧರ್ಮ ಇಲ್ಲವೆಂಬತ್ತೆ ಪರಸ್ಪರ ಮೂರು ವರ್ಷಗಳಿಂದ ಪ್ರೀತಿ ಮಾಡ್ತೀದ್ರು. ಪ್ರೀತಿ ಮಾಡಿದ್ದೇ ತಪ್ಪಾಯ್ತು ಎಂಬಂತೆ ಯುವತಿ ಮನೆಯವರು ಯುವಕನನ್ನ ಕರೆಸಿ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿಬಿಟ್ಟಿದ್ದಾರೆ. ಅಂದಹಾಗೆ, ಕೊಲೆಯಾದ ಲಕ್ಷ್ಮಿಪತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಸವನಳ್ಳಿ ಮೂಲದವನು. ಇನ್ನು ಯುವತಿ ಅದೇ ಊರಿನ ಪಕ್ಕದ ಇಸ್ಲಾಂಪುರ ನಿವಾಸಿ. ಅವರಿಬ್ಬರು ಪ್ರೀತಿ ಮಾಡುತ್ತಿದ್ದ ವಿಚಾರ ಯುವತಿ ಮನೆಯವರಿಗೆ ಗೊತ್ತಿತ್ತು. ಇದರಿಂದಾಗಿ ಅನೇಕ ಬಾರಿ ಯುವಕನನ್ನ ಕರೆದು ಬುದ್ದಿ ಹೇಳಿದ್ರು. ನಮ್ಮ ಮನೆಯ ಹುಡುಗಿಯ ಸಹವಾಸ ಮಾಡಬೇಡ. ಅವಳನ್ನು ಮರೆತು ಬಿಡು ಎಂದು ಎಚ್ಚರಿಕೆಯನ್ನು ನೀಡಿದ್ರು. ಯಾವುದಕ್ಕೂ ಜಗ್ಗದ ಲಕ್ಷ್ಮೀಪತಿ ಯುವತಿಯನ್ನು ಕರೆದುಕೊಂಡು ಎರಡು ಭಾರಿ ಓಡಿ ಹೋಗಿದ್ದ. ಇದರಿಂದ ಕೋಪಗೊಂಡ ಯುವತಿಯ ಪೋಷಕರು. ಅನೇಕ ಬಾರಿ ಬುದ್ದಿ ಹೇಳಿದ್ರು ಕೇಳುತ್ತಿಲ್ಲ ಇವನನ್ನ ಮುಗಿಸಲೇಬೇಕು ಎಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ರು. ಅಂದಹಾಗೆ.. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಇದ್ದ ಲಕ್ಷ್ಮೀಪತಿಗೆ ಕರೆ ಮಾಡಿಮದುವೆ ವಿಚಾರ ಮಾತನಾಡಬೇಕು ಅಂತಾ ಕರೆಸಿಕೊಳ್ಳುತ್ತಾರೆ. ನಂತ್ರ ನೆಲಮಂಗಲದ ಬಾರ್ ಒಂದರಲ್ಲಿ ಮದ್ಯವನ್ನು ತೆಗೆದುಕೊಂಡು ಲಕ್ಷ್ಮಿಪತಿ ಹಾಗೂ ಆತನ ಸಹೋದರ ನಟರಾಜ್ ನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಸ್ಲಾಂಪುರಕ್ಕೆ ಕರೆದುಕೊಂಡು ಹೋಗುತ್ತಾರೆ.
ಬಳಿಕ ಅಲ್ಲಿಂದ ಸೋಲೂರು ಬಳಿಯ ಕನಕೇನಹಳ್ಳಿ ದರ್ಗಾದ ಬಳಿ ನಿರ್ಜನ ಪ್ರದೇಶದ ಮದ್ಯೆ ಎಲ್ಲರೂ ಚೆನ್ನಾಗಿ ಕುಡಿದ ಅಮಲಿನಲ್ಲಿ ಇರುತ್ತಾರೆ. ಚೆನ್ನಾಗಿ ತಿಂದು ಅಮಲಿನಲ್ಲಿದ್ದ ಲಕ್ಷ್ಮಿಪತಿಯನ್ನ ನೀನು ಕೀಳು ಜಾತಿಯವನು ನಮ್ಮ ಹುಡುಗಿಯನ್ನ ಮದುವೆ ಮಾಡಿಕೊಳ್ಳಬೇಕಾ ಎಂದು ಹಲ್ಲೆ ನಡೆಸಿ ಆತ ಹಾಕಿಕೊಂಡಿದ್ದ ಬೆಲ್ಟ್ ನಲ್ಲೇ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಈಗಾಗಲೇ ನಿಜಾಂಉದ್ದೀನ್ ಹಾಗೂ ಶಿಕಂದರ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಒಟ್ಟಾರೆ ಅನ್ಯ ಕೋಮಿನ ಯುವತಿಯೊಂದಿಗೆ ಪ್ರೀತಿ ಮಾಡಿದ್ದೇ ಲಕ್ಷ್ಮಿಪತಿಗೆ ಮುಳುವಾಗಿ ಬಿಡ್ತು. ಈ ಕೊಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.