ಕೂಗು ನಿಮ್ಮದು ಧ್ವನಿ ನಮ್ಮದು

ಮನೆ ತನಕ ಫುಡ್‌ ಕೊಡೋಕೆ, ಸರ್ಕಾರ ಜೊಮೋಟೋ ಸೇವೆ ಕೊಡ್ತಿಲ್ಲ. ‘ಪ್ರವಾಹ ಸಂತ್ರಸ್ತರಿಗೆ ಡಿಸಿ ಆವಾಜ್!

ಲಕ್ನೋ: ಘಾಘ್ರಾ ನದಿಯ ಪ್ರವಾಹದಿಂದಾಗಿ ಉತ್ತರ ಪ್ರದೇಶದ ಅಂಬೇಡ್ಕರ್‌ನಗರ ಜಿಲ್ಲೆ ಭೀಕರ ಪ್ರವಾಹ ಉಂಟಾಗಿದೆ. ಪ್ರವಾಹದಿಂದ ನಿರಾಶ್ರಿತರಾದ ಜನರನ್ನು ಭೇಟಿಯಾಗಲು ತೆರಳಿದ್ದ ಅಂಬೇಡ್ಕರ್‌ ನಗರ ಡಿಸಿ ಸ್ಯಾಮ್ಯುಯೆಲ್‌ ಪಾಲ್‌ ತೆರಳಿದ್ದರು. ಈ ವೇಳೆ ಅವರು ಹೇಳಿರುವ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗಿದೆ. ನೀವು ನಿರಾಶ್ರಿತರಾಗಿ ಕಷ್ಟದಲ್ಲಿರಬಹುದು. ಆದರೆ, ನಿಮ್ಮ ಮನೆ ಮನೆಗಳಿಗೆ ಆಹಾರವನ್ನು ತಲುಪಿಸಲು ಸರ್ಕಾರವೇನು ಜೊಮಾಟೋ ಸೇವೆ ನಡೆಸುತ್ತಿಲ್ಲ ಎಂದು ಸಂತ್ರಸ್ತರಿಗೆ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗತ್ತಿದ್ದು, ಡಿಸಿಯ ಅಹಂಕಾರವನ್ನು ಜನರು ಟೀಕೆ ಮಾಡುತ್ತಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಜಿಲ್ಲಾಧಿಕಾರಿ ಸ್ಯಾಮ್ಯುಯೆಲ್‌ ಪೌಲ್‌, ಅವರು ಪ್ರವಾಹದ ಬಳಿಕ ಅಲ್ಲಿನ ಗ್ರಾಮಸ್ಥರಿಗೆ, ‘ಪ್ರವಾಹದ ಪೋಸ್ಟ್‌ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ, ಕ್ಲೋರಿನ್ ಮಾತ್ರೆಗಳನ್ನು ನೀಡುತ್ತೇವೆ, ಯಾರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ.

ಯಾರಿಗಾದರೂ ಕಾಯಿಲೆ ಬಂದರೆ ವೈದ್ಯರು ಬಂದು ನೋಡುತ್ತಾರೆ. ಅದಕ್ಕಾಗಿಯೇ ಪ್ರವಾಹದ ಪೋಸ್ಟ್ ಅನ್ನು ಸ್ಥಾಪಿಸಲಾಗಿದೆ. ಪ್ರವಾಹ ಪೋಸ್ಟ್‌ ಸ್ಥಾಪಿಸಿರುವ ಉದ್ದೇಶ ಇದೆ. ನೀವು ಮನೆಯಲ್ಲಿಯೇ ಇದ್ದರೆ, ನಾವು ಮನೆಗೆ ಆಹಾರವನ್ನು ತಲುಪಿಸುತ್ತೇವೆಯೇ? ನಾವೇನಾದರೂ ಜೊಮಾಟೋ ಸೇವೆಯನ್ನು ನಡೆಸುತ್ತಿದ್ದೇವೆ ಎಂದು ನಿಮಗನಿಸುತ್ತಿದ್ದೆಯೇ? ಮನೆ ಮನೆಗೆ ಆಹಾರ ತಲುಪಿಸಲು ಸರ್ಕಾರ ಜೊಮಾಟೋ ಸೇವೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.


500 ಮೀಟರ್ ಅಥವಾ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರವಾಹ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ಶೌಚಾಲಯ ಸೌಲಭ್ಯಗಳು, ಕುಡಿಯುವ ನೀರು, ವೈದ್ಯಕೀಯ ಆರೋಗ್ಯ ಶಿಬಿರಗಳು ಮತ್ತು ಇತರ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜನರಿಗೆ ತಿಳಿಸಿದರು. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಪ್ರವಾಹ ಪರಿಹಾರ ಶಿಬಿರಗಳಲ್ಲಿ ಉಳಿಯುವಂತೆ ಅವರು ಕೇಳಿಕೊಂಡಿದ್ದಾರೆ. ಇದಲ್ಲದೇ ಅಲ್ಲಿ ಪರಿಹಾರ ಕಿಟ್‌ಗಳನ್ನೂ ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಅವರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡಿದ್ದು, ಜನರು ಅವರನ್ನು ಸಂವೇದನಾರಹಿತ ಅಧಿಕಾರಿ ಎಂದು ಕರೆದಿದ್ದಾರೆ.

ಈ ಕುರಿತಂತೆ ಮಾಧ್ಯಮಗಳು ಡಿಸಿ ಸಂಪರ್ಕಕ್ಕೆ ಪ್ರತ್ನಿಸಿದರಾದರೂ, ಅಂಬೇಡ್ಕರ್‌ ನಗರದ ಜಿಲ್ಲಾಧಿಕಾರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ತಮ್ಮ ಕಡೆಯ ಮಾಹಿತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿಯೇ ನೀಡುವುದಾಗಿ ಅವರು ಹೇಳಿದ್ದಾರೆ. ಘಾಘ್ರಾ ನದಿಯು ಅಂಬೇಡ್ಕರ ನಗರ ಜಿಲ್ಲೆಯಲ್ಲಿ ತನ್ನ ಆರ್ಭಟ ತೋರುತ್ತಿದೆ. ಕೇವಲ ಜಿಲ್ಲೆಯ ಗ್ರಾಮ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಪ್ರವಾಹದ ನೀರು ಬಂದಿದೆ. ಜಿಲ್ಲೆಯ ಆಲಾಪುರ ಮತ್ತು ತಾಂಡಾ ತಹಸಿಲ್ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಹಳ್ಳಿಗಳ ಜನರು ಈ ಭೀಕರ ಪ್ರವಾಹದ ವಿರುದ್ಧ ಹೋರಾಡುತ್ತಿದ್ದಾರೆ. ಕೃಷಿಯಿಂದ ಹಿಡಿದು ಅವರ ಇಡೀ ಕುಟುಂಬ ಪ್ರವಾಹದ ಆಕ್ರೋಶಕ್ಕೆ ಒಳಗಾಗಿದೆ. ತಾಂಡಾ ತಹಸಿಲ್ ಕೇಂದ್ರ ಕಚೇರಿಯ ಅರ್ಧ ಡಜನ್ ಪ್ರದೇಶಗಳು ಪ್ರವಾಹದ ಹಿಡಿತದಲ್ಲಿದ್ದು, ನೂರಾರು ಪವರ್ ಲೂಮ್‌ಗಳು ಜಲಾವೃತಗೊಂಡಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.

ಅತಿವೃಷ್ಟಿಯಿಂದ ತಾಂಡಾ ತಹಸೀಲ್ ಪ್ರದೇಶದ ಜನರು ಹೆಚ್ಚು ತೊಂದರೆಗೀಡಾಗಿದ್ದಾರೆ. ಇಲ್ಲಿ ಉಕ್ಕಿ ಹರಿಯುತ್ತಿರುವ ಸರಯೂ ನದಿಯ ಪ್ರವಾಹವು ತಾಂಡಾ ಪಟ್ಟಣದ ಅಲಿಗಂಜ್, ರಾಜ್‌ಘಾಟ್, ಚೌಕ್ ಹನುಮಾನಗರ್ಹಿ, ನೆಹರುನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವೇಶಿಸಿದೆ. ಮೊಣಕಾಲಿನವರೆಗೂ ಜನರ ಮನೆಗಳಿಗೆ ನೀರು ನುಗ್ಗಿದ್ದು, ಇದರಿಂದ ತಾಂಡಾ ನಗರದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ತಾಂಡಾ ವ್ಯಾಪ್ತಿಯಲ್ಲಿ ಹಲವು ವರ್ಷಗಳ ನಂತರ ಇಂತಹ ಪ್ರವಾಹ ಉಂಟಾಗಿದ್ದರೂ ಇಲ್ಲಿನ ಆಡಳಿತದಿಂದ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಪ್ರವಾಹ ಪೀಡಿತ ಜನರು ಹೇಳಿದ್ದಾರೆ.

error: Content is protected !!