ಕೂಗು ನಿಮ್ಮದು ಧ್ವನಿ ನಮ್ಮದು

ಬಿಸಿಲು ನಾಡಿನ ಹುಡುಗಿ ಓದುವುದಕ್ಕೂ ಸೈ ಹೊಲದಲ್ಲಿ ಉಳಿಮೆ ಮಾಡಲು ಸೈ ಯಾರು ಆ ಯುವತಿ ಅಂತೀರಾ! ಈ ಸ್ಟೋರಿ ಓದಿ

ರಾಯಚೂರು: ಜೈ ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದೆ. ಎಲ್ಲಾ ಕಡೆಯೂ ರೈತರು ಬಿತ್ತನೆಗೆ ಮುಂದಾಗುತ್ತಿದ್ದಾರೆ. ಬಿಸಿಲನಾಡು ರಾಯಚೂರಿನಲ್ಲಿಯೂ ನಿಧಾನವಾಗಿ ಬಿತ್ತನೆ ಕಾರ್ಯ ಚಾಲನೆ ಪಡೆದುಕೊಂಡಿದೆ. ಹೊಲದಲ್ಲಿ ಉಳಿಮೆ ಮಾಡಲು ಯುವಕರೇ ಹಿಂದೆಟು ಹಾಕುತ್ತಿರುವ ಈ ಕಾಲದಲ್ಲಿ ಯುವತಿಯೊಬ್ಬಳು ಹೊಲದಲ್ಲಿ ಉಳಿಮೆಮಾಡಿ ಸಾದನೆ ಮಾಡಲು ಸಾಧ್ಯವೇ. ನಿಜ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಳ್ಳಲು ಎಂಬುದು ಸಾಭೀತಾಗುತ್ತಲೇ ಇದೆ. ಆದರೆ ರೈತ ಮಹಿಳೆ ಆಗಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ತನ್ನ ಓದನ್ನ ಮುಂದುವರೆಸಿಕೊಂಡು ಈ ಕಡೆ ಹೊಲಕ್ಕೆ ಹೋಗಿ ಉಳಿಮೆ ಮಾಡಿ ಸೈ ಎನಿಸಿಕೊಳ್ಳುವುದು ಸಾಧ್ಯವೇ ಇಲ್ಲ ಬಿಡಿ. ಆದರೆ ಸಾಧಿಸುವ ಛಲವೊಂದಿದ್ದರೇ ಎಂತಹ ಕಷ್ಟದ ಕೆಲಸವನ್ನಾದರೂ ಮಾಡಿ ಮುಗಿಸಿಬಿಡಬಹುದು ಎಂದು ಸಾಧಿಸಿ ತೋರಿಸಿದ್ದಾಳೆ ಈ ಹುಡುಗಿ.

ಈ ಯುವತಿಯ ಹೆಸರು ಹುಲಿಗೆಮ್ಮ ಬಿಸಿಲನಾಡು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮ ಈಕೆಯ ಊರು. ಈಕೆ ಸಿರವಾರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಪ್ರಥಮ ಡಿಗ್ರಿ ಓದುತ್ತಿದ್ದಾಳೆ. ತನ್ನ ಭವಿಷ್ಯಕ್ಕೆ ಓದು ತುಂಬಾ ಮುಖ್ಯವೆಂದು ನಂಬಿರುವ ಈಕೆಗೆ ತಂದೆಯ ಅಕಾಲಿಕ ಸಾವು ದೊಡ್ಡ ಅಘಾತವನ್ನೇ ತಂದೊಡ್ಡುತ್ತದೆ. ಮನೆಯಲ್ಲಿ ಹೇಳಿಕೊಳ್ಳುವಂತಹ ಸಿರಿತನವೇನು ಇಲ್ಲ. ಅಣ್ಣ ತನ್ನ ಬದುಕು ಕಟ್ಟಿಕೊಳ್ಳಲು ದೂರದ ಬೆಂಗಳೂರಿನಲ್ಲಿ ದುಡಿಯುತ್ತಿದ್ದಾನೆ. ಅಕ್ಕ ಡಿಗ್ರಿ ಓದುತ್ತಿದ್ದಾಳೆ ಈಕೆಯೇ ಕೊನೆಯವಳು ಮನೆಗೆ. ಅಪ್ಪ ಬದುಕಿದ್ದಾಗ ಆತನೊಂದಿಗೆ ಹೊಲಕ್ಕೆ ಹೋಗಿ ಅಪ್ಪ ಮಾಡುವ ಕೆಲಸ ಕಾರ್ಯಗಳನ್ನ ಗಮನಿಸಿ ತನ್ನಿಂದ ಆದಷ್ಟು ಸಹಾಯವನ್ನ ಅಪ್ಪನಿಗೆ ಮಾಡುವ ಮನಸ್ಸು. ರೈತ ಹೊಲದಲ್ಲಿ ಉತ್ತಿ ಬಿತ್ತಿ ಬೆಳೆಯಬೇಕಾದರೆ ಅನುಭವಿಸಬೇಕಾಗುವ ನೋವು, ಕೂಲಿ ಆಳುಗಳ ಸಮಸ್ಯೆ, ಹಣದ ಅಡಚಣೆ, ಬೀಜ ಗೊಬ್ಬರ, ಬೆಳೆಗಳ ನಿರ್ವಹಣೆ ಹೀಗೆ ಹಲವಾರು ವಿಷಯಗಳು ಹೇಗೆ ರೈತನ ಬೆನ್ನೆಲುಬನ್ನ ಮುರಿಯುತ್ತವೆ ಎಂಬುದನ್ನ ತಿಳಿದುಕೊಂಡಳು. ಕಳೆದ 2 ವರ್ಷಗಳಿಂದ ಪಾರ್ಶವಾಯು ಕಾಯಿಲೆಗೆ ತುತ್ತಾಗಿದ್ದ ಅಪ್ಪಾ ಹಾಸಿಗೆ ಹಿಡುಯುತ್ತಾನೆ. ಅಪ್ಪನ ಚಿಕಿತ್ಸೆಗೆ ಇರುವ ಎಲ್ಲಾ ಹಣವೂ ಖರ್ಚಾಗುತ್ತದೆ. ಹೊಲದಲ್ಲಿ ಬಿತ್ತಿ ಬೆಳೆಯ ಬೇಕಾದ ಅನಿವಾರ್ಯತೆ.

ಆದರೆ ಅಪ್ಪನಿಗೆ ಹುಷಾರು ಇರೋದಿಲ್ಲ. ಕೊನೆಗೆ ಬೆನ್ನು ಬಿಡದ ಅನಾರೋಗ್ಯದಿಂದ ಅಪ್ಪ ಸಾವನ್ನಪ್ಪಿದ ನಂತರ ಇಡೀ ಕುಟುಂಬಕ್ಕೆ ದಿಕ್ಕೆ ತೋಚದಂತಾಗುತ್ತದೆ. ಕರೋನಾದ ಸಮಯದಲ್ಲಿ ಹೊಲದಲ್ಲಿ ಬೆಳೆದಿದ್ದ ಬೆಳೆಯನ್ನು ಸಂರಕ್ಷಿಸಬೇಕಾದ ಮತ್ತೆ ಬಿತ್ತಿ ಬೆಳೆಯಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇರುವ 3 ಎಕರೆ ಹೊಲದಲ್ಲಿ ಉಳಿಮೆ ಮಾಡಲು ತನ್ನ ಚಿಕ್ಕಪ್ಪನ ಹತ್ತಿರ ಟ್ರಾಕ್ಟರ್ ಪಡೆದುಕೊಳ್ಳುತ್ತಾಳೆ ಆದರೆ ಟ್ರಾಕ್ಟರ್ ಯಾರು ಚಲಾಯಿಸಬೇಕು. ಡ್ರೈವರಗೆ ಕೊಡಲು ಹಣ ಕೂಡ ಬೇಕು. ಆದರು ಟ್ರಾಕ್ಟರ್ ಚಲಾಯಿಸಲು ಡ್ರೈವರಗಾಗಿ ಹುಡುಕಾಟ ನೆಡೆಸುತ್ತಾಳೆ. ಆದರೆ ಈಕೆಯ ಸಮಯಕ್ಕೆ ಯಾರು ಸಿಗುವುದಿಲ್ಲ.

ಒಂದೇಡೆ ಬೆಳೆ ಬೆಳೆಯದಿದ್ದರೇ ಮುಂದಿನ ದಿನಗಳಲ್ಲಿ ಉಪವಾಸ ಬೀಳಬೇಕಾದ ಪರಿಸ್ಥಿತಿ, ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಒಂದು ದೊಡ್ಡ ಪೆಟ್ಟೆ ಬೀಳುವ ಸಂಭವ. ಏನು ಮಾಡುವುದು ಗೊತ್ತಾಗದೇ ಚಿಕ್ಕಪ್ಪನ ಟ್ರಾಕ್ಟರ್ ತನ್ನ ಅಪ್ಪ ಚಲಾಯಿಸುವಾಗ ಆತನ ಜೊತೆಗೆ ಅದರಲ್ಲಿ ಕುಳಿತು ನೋಡಿದ ಮತ್ತು ಆಗೊಮ್ಮೆ ಈಗೊಮ್ಮೆ ತಾನು ಚಲಾಯಿಸಲು ಪ್ರಯತ್ನಿಸಿದ ಅನುಭವವನ್ನೇ ನಂಬಿಕೊಂಡು ಟ್ರಾಕ್ಟರ್ ಏರಿಯೇ ಬಿಟ್ಟಳು. ಮೊದ ಮೊದಲು ಭಯ, ಆತಂಕ, ನಿಭಾಯಿಸಬಲ್ಲೆನಾ ಎಂಬ ಆತಂಕ ಕಾಡಿತ್ತಾದರೂ. ಛಲ ಬಿಡದೇ, ಮಾಡಲೇ ಬೇಕಾದ ಅನಿವಾರ್ಯತೆಗೆ ತನ್ನನ್ನ ತಾನು ಸಮರ್ಪಿಸಿಕೊಂಡು ಟ್ರಾಕ್ಟರ್ ಓಡಿಸಲು ಪ್ರಾರಂಭಿಸಿದಳು. ತನ್ನ ತಂದೆಯವರ ಪ್ರೇರಣೆಯಿಂದ ತಾನೇ ಸ್ವತ: ಟ್ರಾಕ್ಟರ್ ಓಡಿಸುವದನ್ನ ಕಲಿತಿದ್ದಲ್ಲದೇ, ನಿಧಾನವಾಗಿ ಉಳಿಮೆಯನ್ನು ಮಾಡಲು ಕಲಿತಳು, ಟ್ರಾಕ್ಟರ್ ಚಾಲನೆಗೆ ಒಬ್ಬ ಡ್ರೈವರಗೆ ಕನಿಷ್ಠ ಪಕ್ಷ 10 ಸಾವಿರವನ್ನಾದರೂ ಖರ್ಚು ಮಾಡಬೇಕಾಗುತ್ತದೆ. ಟ್ರಾಕ್ಟರ್ ಚಾಲನೆಯನ್ನ ತಾನೇ ಕಲಿತು ತಾನೇ ಉಳಿಮೆ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಆಸರೆಯಾದಳು. ಕರೋನಾದ ಸಮಯದಲ್ಲಿ ಕಾಲೇಜುಗಳು ಸರಿಯಾಗಿ ನಡೆಯಲಿಲ್ಲವಾದ್ದರಿಂದ ಸಿಕ್ಕಿರುವ ಸಮಯದಲ್ಲೇ ತನ್ನನ್ನ ತಾನು ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಳು. ಬರೀ ಟ್ರಾಕ್ಟರ್ ಅಷ್ಟೇ ಅಲ್ಲದೇ, ಟಾಟಾ ಎಸಿಯಂತಹ ವಾಹನಗಳನ್ನು ಚಲಾಯಿಸಿಕೊಂಡು ಹೊಲದಿಂದ ಬೆಳೆಗಳನ್ನು ತರುವ ಮತ್ತು ಮನೆಯಿಂದ ಸಾಮಾನುಗಳನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದಾಳೆ. ಇದೀಗ ಹುಲಿಗೆಮ್ಮಳ ಈ ಸಾಧನೆಯನ್ನ ಜಿಲ್ಲೆಯ ಜನತೆಯೇ ಹಾಡಿಹೊಗಳುತ್ತಿದೆ.

ಸಾಧನೆ ಎನ್ನುವುದು ಕೇವಲ ಪಟ್ಟಣದವರಿಗೆ ಮಾತ್ರ ಸೀಮಿತವಲ್ಲ ಹಳ್ಳಿಗರು ಕೂಡ ಸಾಧನೆ ಮಾಡಬಹುದು ಸಾಧಿಸುವ ಛಲವೊಂದಿದ್ದರೇ ಎನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಸಾಧನೆ ಮತ್ತು ಛಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಂದಾಗ ಮಾತ್ರ ಆ ಪದಕ್ಕೆ ಬೆಲೆ ಬರುತ್ತೆ. ಹುಲಿಗೆಮ್ಮಳ ಈ ಸಾಧನೆಯೂ ಇತರೇ ಯುವತಿಯರು ಸ್ಪುರ್ತಿಯನ್ನ ಪ್ರೇರಣೆಯನ್ನ ನೀಡಿದರೆ, ನಾನು ಗಂಡಸು ಎಂದು ಬೀಗುತ್ತಾ ಯಾವ ಕೆಲಸವನ್ನು ಮಾಡದೇ ಸುಮ್ಮನೆ ಕಾಲ ಕಳೆಯುವ ಯುವಕರಿಗೆ ಈ ಹುಲಿಗೆಮ್ಮಳನ ಸಾಧನೆಯಿಂದ ಪಾಠ ಕಲಿತು ತಾವು ದುಡಿಯುವ ಜೀವಿಗಳಾಗಳು ಆ ಮೂಲಕ ಸ್ವಾವಲಂಭಿ ಜೀವನ ನಡೆಸಲು ಮುಂದಾಗಲಿ ಎಂಬುದೇ ನಮ್ಮ ಆಶಯವಾಗಿದೆ.

error: Content is protected !!