ಕೊಡಗು: ಕೊಡಗಿನ ಜನ್ರು ಸಾಹಸಪ್ರೀಯರು…ಕೊಡಗಿನ ಜನರಿಗೂ ಬಂದೂಕಿಗೂ ಶತಮಾನಗಳಿಂದ ವಿಶೇಷ ನಂಟಿದೆ. ಕೊಡಗಿನ ಹಬ್ಬಗಳಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಹಬ್ಬ ಆಚರಣೆ ಮಾಡೋದು ಅಲ್ಲಿಯ ಪರಂಪರೆ.. ಆದ್ರೆ ಇಲ್ಲೊಬ್ಬ ನಾರಿ ಶೂಟ್ ಮಾಡೋ ರೀತಿ ಮಾತ್ರ ಫುಲ್ ಡಿಫರೆಂಟ್. ಆ ಮಹಿಳೆಯ ಶೂಟಿಂಗ್ ಸ್ಕಿಲ್ಸ್ ನೋಡಿದ್ರೆ ನೀವೂ ಫಿದಾ ಆಗೋದರಲ್ಲಿ ಡೌಟೇ ಇಲ್ಲಾ. ಯಾರಿದು ಆ ಲೇಡಿ ಅಂತೀರಾ…..? ಈ ಸ್ಟೋರಿ ಓದಿ.
ಸೀರೆ ಉಟ್ಟವಳ ಕೈಯಲ್ಲಿ ಬಂದೂಕು.. ಗನ್ ಟ್ರಿಗ್ಗರ್ ಮೇಲೆ ಪುಟ್ಟ ಕನ್ನಡಿ… ಬಂದೂಕನ್ನ ಹಿಂದೆ ತಿರುಗಿಸಿ ಗುರಿಗೆ ಗುರಿ ಇಟ್ಟು ನಿಂತಿರೋ ಕೊಡವತಿ. ಇಟ್ಟ ಗುರಿ ಮಿಸ್ ಇಲ್ದೆ ಡಮ್ ಅನ್ನಿಸೋ ಸೂಪರ್ ಲೇಡಿ.. ವಾವ್… ಇದು ಸಾಧ್ಯಾನಾ ಎಂದು ನೀವ್ ಯೋಚನೆ ಮಾಡ್ತಾ ಇದ್ದೀರಾ … ಎಸ್… ಹೀಗೊಂದು ದೃಶ್ಯ ಕಂಡು ಬಂದಿದ್ದು ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ಟಿ.ಶೆಟ್ಟಿಗೇರಿ ಸಮೀಪದ ತಾವಳಗೇರಿಯಲ್ಲಿ. ಕೊಡಗು ಜಿಲ್ಲೆಯಲ್ಲಿ ಗನ್ ಹಿಡಿದು ಶೂಟ್ ಮಾಡಿ ತಾವು ಉತ್ತಮ ಗುರಿಕಾರರು ಅನಿಸಿಕೊಳ್ಳೋ ಸಾಕಷ್ಟು ಮಂದಿ ಇದ್ದಾರೆ. ನೇರವಾಗಿ ಒಂದು ಟಾರ್ಗೆಟ್ ಇಟ್ಟು ಅದಕ್ಕೆ ಶೂಟ್ ಮಾಡ್ಬೇಕು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಆದ್ರೆ, ಹೀಗೆ ಕೊಡವ ಸೀರೆ ಉಟ್ಟ ಕಳ್ಳಿಚಂಡ ಡೀನಾ ಎಂಬ ಮಹಿಳೆ ಪುರುಷರಿಗೆ ಸೆಡ್ಡು ಹೋಡೆದು, ಒಂದು ಕೈ ಮೇಲೆ ಎಂಬಂತ್ತೆ ಬಂದೂಕು ಬಳಕೆಯಲ್ಲಿ ತಮಗಿರುವ ವಿಶೇಷ ಪ್ರತಿಭೆಯಿಂದ ಸಕ್ಕತ್ ಸುದ್ದಿಯಲ್ಲಿದ್ದಾರೆ. ತಮ್ಮ ಎದುರು ಕನ್ನಡಿ ಇಟ್ಟುಕೊಂಡು ಅದರಲ್ಲಿ ಕಂಡು ಬರುವ ಬೆನ್ನು ಹಿಂದಿನ ಗುರಿಗೆ ಇವರು ಲೀಲಾಜಾಲವಾಗಿ ಏರ್ಗನ್ ಬಳಸಿ ಶೂಟ್ ಮಾಡಬಲ್ಲ ಟ್ಯಾಲೆಂಟ್ ಹೊಂದಿದ್ದಾರೆ.
ನೇರವಾಗಿ ಶೂಟ್ ಮಾಡಲು ಹಲವಾರು ಮಂದಿ ತಡಕಾಡುತ್ತಾರೆ. ಆದ್ರೆ ಈ ಡೀನಾ ಮಾತ್ರ ಗನ್ ಉಲ್ಟಾ ಹಿಡಿದು ಬಲೂನ್ ನನ್ನು ಡಮಾರ್ ಮಾಡುವ ಮೂಲಕ ಈ ಮಹಿಳೆ ಇದೀಗ ಕೊಡಗು ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾಳೆ. ವರ್ಷದ ಹಿಂದೆ ಸರ್ಕಸ್ ಒಂದರಲ್ಲಿ ಕಲಾವಿದರು ಹಿಮ್ಮುಖ ಶೂಟ್ ಮಾಡುವುದನ್ನು ನೋಡಿದ ಮೇಲೆ ನಾನೂ ಯಾಕೆ ಪ್ರಯತ್ನಿಸಬಾರದು ಎನ್ನುವ ಆಸೆ ಹುಟ್ಟಿಕೊಂಡಿತ್ತಂತೆ. ಸರ್ಕಸ್ ನೋಡಿ ಮನೆಗೆ ಮರಳಿದ ಡೀನಾ, ಸರ್ಕಸ್ ಮಾದರಿಯಲ್ಲಿ ಹಿಮ್ಮುಖ ಶೂಟಿಂಗ್ ಅಭ್ಯಾಸ ಆರಂಭಿಸಿ ಬಂದೂಕಿನಿಂದ ಉಲ್ಟಾ ಗುರಿಯಿಟ್ಟು ಹೊಡೆಯೊದ್ರಲ್ಲಿ ಸಕ್ಸಸ್ ಆಗಿದ್ದಾರೆ.
ಇನ್ನು, ಡೀನಾರ ಈ ವಿಶೇಷ ಸಾಧನೆಗೆ ತನ್ನ ತಂದೆಯೇ ಸ್ಪೂರ್ತಿ. ಜೀವನದಲ್ಲಿ ಏನಾದ್ರು ಡಿಫ್ಫರೆಂಟ್ ಆಗಿ ಸಾಧನೆ ಮಾಡಬೇಕು ಅನ್ನೋ ಹಂಬಲವಿರೋ ಈ ಗೃಹಿಣಿ ಡೀನಾ, ಕಿರುಚಿತ್ರ ನಿರ್ದೇಶಕಿಯೂ ಹೌದು. ಕೊಡಗು ಜಿಲ್ಲೆಯಲ್ಲಿ ಯಾವುದೇ ಗನ್ ಶೂಟಿಂಗ್ ಸ್ಪರ್ಧೆ ನಡೆದ್ರೂ ಈ ಲೇಡಿ ಅಲ್ಲಿ ಪಕ್ಕ ಹಾಜರಾಗಿರ್ತಾರೆ. ಇನ್ನು, ಮಗಳ ಡಿಫರೆಂಟ್ ಶೈಲಿಯ ಶೂಟಿಂಗ್ ಗೆ ತಂದೆ ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸ್ತಾರೆ. ನನ್ನ ಮಗಳು ಚಿಕ್ಕ ವಯಸಿನಿಂದಲೇ ಎಲ್ಲದರಲ್ಲೂ ಡಿಫರೆಂಟ್. ಏನಾದರೂ ಬೇರೆ ರೀತಿಯಲ್ಲೇ ಸಾಧನೆ ಮಾಡಬೇಕು ಅನ್ನೋ ಹಂಬಲ ಅವಳದ್ದು. ಹೀಗೆ ಮಗಳು ಬಂದೂಕಿನಿಂದ ಗುರಿಗೆ ಉಲ್ಟಾ ಗುಂಡು ಹೊಡೆಯೋ ಕಲೆಯಿಂದ ಡೀನಾ ಮನೆತನದ ಗೌರವ ಹೆಚ್ಚಿಸಿದ್ದಾಳೆ ಎನ್ನುವ ಮಾತು ತಂದೆಯದ್ದು.
ಒಟ್ನಲ್ಲಿ, ಮಹಾಭಾರತ ಕಥೆಯಲ್ಲಿ ಅರ್ಜುನ ನೀರಿನಲ್ಲಿ ಮೀನಿನ ಪ್ರತಿಬಿಂಬ ನೋಡಿ ಬಾಣ ಬಿಟ್ಟ ರೀತಿಯಲ್ಲಿ ಕೊಡಗಿನ ಡೀನಾ ಬೆನ್ನು ಹಿಂದಿರುವ ಗುರಿಗೆ ಟಾರ್ಗೆಟ್ ಇಡುವ ಸ್ಟೈಲ್ ಗೆ ಎಲ್ರೂ ಫಿದಾ ಆಗಿದಂತೂ ಸತ್ಯ.