ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎದ್ದಿರುವ ನಾಯಕತ್ವ ಅಪಸ್ವರ ಕುರಿತು ಇಂದು ಹಲವು ನಾಯಕರ ಅಭಿಪ್ರಾಯವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಂಗ್ರಹಿಸುತ್ತಿದ್ದಾರೆ. ಇದೇ ವೇಳೇ ಬಸನಗೌಡ ಯತ್ನಾಳ್ ಗೂ ಅವಕಾಶ ನೀಡಲಾಗಿತ್ತು. ಆದರೆ, ಕಡೆ ಕ್ಷಣದಲ್ಲಿ ಅವರ ಭೇಟಿಯನ್ನು ನಿರಾಕರಿಸಲಾಗಿದೆ. ಇಂದು ರಾಜ್ಯದ 10ಕ್ಕೂ ಹೆಚ್ಚು ಮಂದಿ ಶಾಸಕರನ್ನು ಭೇಟಿಯಾಗಿ ಈಗಾಗಲೇ ಅಭಿಪ್ರಾಯ ಪಡೆದಿದ್ದಾರೆ. ಇದೇ ವೇಳೆ ಸಂಜೆ 4. 30ಕ್ಕೆ ಕೂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಸಭೆಗೆ ಸಮಯ ನಿಗದಿಸಲಾಗಿತ್ತು, ಆದರೆ, ಈ ಭೇಟಿ ಸಮಯವನ್ನು ಅರುಣ್ ಸಿಂಗ್ ಅವರು ರದ್ದು ಮಾಡಿ, ಕಡೆಯ ಘಳಿಗೆಯಲ್ಲಿ ಯತ್ನಾಳ್ಗೆ ಶಾಕ್ ನೀಡಿದ್ದಾರೆ. ಆ ಮೂಲಕ ಅವರ ವಿರುದ್ಧ ಪರೋಕ್ಷವಾಗಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.