ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಯಡಿಯೂರಪ್ಪ-ಪುತ್ರ ವಿಜಯೇಂದ್ರ ವಿರುದ್ದ ಮತ್ತೆ ಹರಿಹಾಯ್ದ ಶಾಸಕ ಯತ್ನಾಳ್

ವಿಜಯಪುರ: ಸಿಎಂ ಯಡ್ಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ದ ವಿಜಯಪುರ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಮತ್ತೆ ಕಿಡಿ ಕಾರಿದ್ದಾರೆ. ವಿಜಯೇಂದ್ರ, ಕೆಲ ವೀರಶೈವ ಸ್ವಾಮಿಜಿಗಳು ಸೇರಿದಂತೆ ಕೆಲ‌ ಮಾಧ್ಯಮಗಳ ವಿರುದ್ಧ ಯತ್ನಾಳ್ ಕಿಡಿ ಕಾರಿದ್ದು, ಆಕ್ರೊಶ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಯತ್ನಾಳ, ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಕೋಟ್ ಬಳಸಿ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದಾರೆ. “ಎಲ್ಲರನ್ನು ಕೆಲವು ಕಾಲ ಮೋಸ ಮಾಡಬಹುದು. ಕೆಲವರನ್ನು ಎಲ್ಲಾ ಕಾಲದಲ್ಲೂ ಮೋಸ ಮಾಡಬಹುದು. ಆದ್ರೆ ಎಲ್ಲರನ್ನು ಎಲ್ಲಾ ಕಾಲದಲ್ಲೂ ಮೋಸಮಾಡಲು ಸಾಧ್ಯವಿಲ್ಲ” ಎಂದು ಕುಟುಕಿದ್ದಾರೆ.

ಹಣದಿಂದ ಕೆಲವು ಸ್ವಾಮಿಜಿಗಳನ್ನು ಖರಿದಿಸಬಹುದು. ಹಣದಿಂದ ಕೆಲವು ಮಾಧ್ಯಮಗಳನ್ನ ಖರೀದಿಸಬಹುದು. ಹಣದಿಂದ ಕೆಲ ನಾಯಕರನ್ನ ಖರೀದಿಸಬಹುದು. ಆದ್ರೆ ಎಲ್ಲರನ್ನೂ, ನೈತಿಕತೆ ಇರುವವರನ್ನೂ, ಮೌಲ್ಯಗಳನ್ನು ಉಳ್ಳ ಜನರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. “ಎಡೇಂದ್ರ” ಎಂದು ಕರೆಯುವ ಮ‌ೂಲಕ ಸಿಎಂ ಬಿಎಸ್ವೈ, ವಿಜಯೆಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!