ಕೂಗು ನಿಮ್ಮದು ಧ್ವನಿ ನಮ್ಮದು

ತಾನು ಮದುವೆಯಾಗುವ ವರನ ಧಾರಾಳತೆ ಟೆಸ್ಟ್ ಮಾಡಲು 23 ಜನರ ಜತೆ ಡೇಟಿಂಗ್‌ಗೆ ಬಂದ ಯುವತಿ!

ಬೀಜಿಂಗ್: ತಾನು ಇಷ್ಟ ಪಡುವ ಹುಡುಗ ಅದೇಷ್ಟು ಉದಾರ ಮನಸ್ಸಿನವನು ಅಂತ ತಿಳಿದುಕೊಳ್ಳಲು ಚೀನಾದ ಬೀಜಿಂಗ್‌ನಲ್ಲಿ ಹುಡುಗಿಯೊಬ್ಬಳು ಸ್ವಾರಸ್ಯಕರ ರೀತಿಯಲ್ಲಿ ತಂತ್ರ ಪ್ರಯೋಗಿಸಿ ಸದ್ದು ಮಾಡಿದ್ದಾಳೆ. ಅದೇನಪ್ಪ ಅಂತ ಸ್ವಾರಸ್ಯಕರ ತಂತ್ರ ಅಂತ ನೀವು ಹಬ್ಬೇರಿಸುತ್ತಿರಬಹುದು. ಆದರೆ ಅದು ಸುಲಭ. ಯಾಕಂದ್ರೆ ತಾನು ಇಷ್ಟಪಟ್ಟ ಹುಡುಗನ ಜೊತೆಗೆ ರೊಮ್ಯಾಂಟಿಕ್ ಸಂಬಂಧ ಇಟ್ಟುಕೊಳ್ಳಲು ಮನಸ್ಸು ಮಾಡಿದ್ದ ಆ ಯುವತಿ, ಎಲ್ಲದಕ್ಕೂ ಮೊದಲು ತಾನು ಇಷ್ಟ ಪಡುವ ಆ ಹುಡುಗ ಎಷ್ಟು ದಿಲ್ದಾರ್ ಇರಬಹುದು ಅಂತ ತಿಳಿಯಲು ಹೊಟೇಲ್ ಒಂದಕ್ಕೆ ಬರಲು ಹೇಳಿದ್ದಳು. ಯುವಕ ಕ್ಸಿಯೊ ಲಿಯೊಗೆ ಆ ಚೆಂದದ ಹುಡುಗಿ ಇಷ್ಟ ಕೂಡ ಆಗಿದ್ದಳು. ಆತನಿಗೆ ಆಕೆಯ ಜೋತೆಯಲ್ಲಿ ರೊಮ್ಯಾನ್ಸ್ ಮಾಡುವ ಕಾತುರವೂ ಹೆಚ್ಚಾಗಿತ್ತು.

ಹೀಗಾಗಿ ಆನ್ಲೈನ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಮಾತುಕತೆಯನ್ನು ಮುಗಿಸಿದ್ದರು. ಆದರೆ ಈ ಇಬ್ಬರು ಒಮ್ಮೆಯೂ ಮುಖಾಮುಖಿ ಮಾತ್ರ ಆಗಿರಲಿಲ್ಲ. ಅದಕ್ಕೆ ತಾನು ಇಷ್ಟ ಪಡುವ ಯುವಕನ ಜೊತೆ ಡೇಟಿಂಗ್ ಕೂಡ ಫಿಕ್ಸ್ ಮಾಡಿದ್ದಾಳೆ. ಫೈವ್‌ಸ್ಟಾರ್ ಹೋಟೆಲ್ ಒಂದಕ್ಕೆ ಯುವಕನಿಗೆ ಬರಲು ಹೇಳಿದ್ದಾಳೆ. ತನ್ನ ಹುಡುಗಿ ಕರೆದದ್ದೇ ತಡ ಯುವಕ ಖುಷಿಯಾಗಿಬಿಟ್ಟ. ಅಲ್ಲದೇ ಹುಡುಗಿ ಹೇಳಿದ ಸಮಯಕ್ಕೆ ಸರಿಯಾಗಿ ಹೋಟೆಲ್ ಸೇರಿದ. ಆತ ಹೊಟೇಲ್ ಸೇರಿದ ಕ್ಷಣ, ದೊಡ್ಡದೊಂದು ಟೇಬಲ್ ಸುತ್ತಲೂ ಕುಳಿತಿದ್ದ 23 ಮಂದಿ ಯುವತಿಯರು ಎದ್ದು ನಿಂತು ಲಿಯೊನನ್ನು ಬರಮಾಡಿಕೊಂಡರು.

ಇವರಲ್ಲಿ ಯಾರು ತನ್ನ ಮನಕದ್ದ ಯುವತಿ ಎಂದು ತಿಳಿಯಲು ಲಿಯೋಗೆ ಕಷ್ಟವಾಯಿತು. ಆಗ ಲಿಯೋನ್ ಮುಂದೆ ಬಂದ ಯುವತಿ ಕೈಚಾಚಿ ಆತನನ್ನು ಪರಿಚಯ ಮಾಡಿಕೊಂಡಳು. ಆಗ ಲಿಯೋನ್ ಇವರೆಲ್ಲ ಯಾರು.. ಇಲ್ಲೇಕೆ ಇವರು.. ಎಂದು ಕೇಳಿದ್ದಾನೆ. ಆಗ ನಗುತ್ತಲೇ ಉತ್ತರಿಸಿದ ಆಕೆ ಅವರೆಲ್ಲ ನನ್ನ ಮನೆಯವರು ಎಂದಿದ್ದಾಳೆ. ಈಗ ನಮ್ಮ ಜೊತೆಗೆ ಊಟ ಮಾಡಿ ಮನೆಗೆ ಹೋಗುತ್ತಾರೆ ಎಂದಿದ್ದಾಳೆ. ಆಗ ಮೌನವಾದ ಹುಡುಗ ಲಿಯೋನ್ ಮೌನವಾಗಿ 23 ಜನರ ಜತೆ ಕುಳಿತು ಊಟ ಮಾಡಿದ್ದಾನೆ. ನಂತರ ವೇಟರ್ ಬಿಲ್ ತಂದು ಕೊಟ್ಟಿದ್ದಾನೆ. ಅದನ್ನು ಯುವತಿ ತನ್ನ ಭಾವಿ ಗೆಳೆಯ ಲಿಯೋನ್ ಕಡೆಗೆ ಸರಿಸಿದ್ದಾಳೆ.

ಆಗ ಅದನ್ನೇ ದಿಟ್ಟಿಸಿ ನೋಡಿದ ಹುಡುಗ ಲಿಯೋನ್, 2 ಲಕ್ಷ 18 ಸಾವಿರ ರೂಪಾಯಿ ಬಿಲ್ ಮೊತ್ತ ನೋಡಿ ಒಂದು ಕ್ಷಣ ದಂಗಾಗಿದ್ದಾನೆ. ಕೂಡಲೇ ತಡಬಡಿಸಿ ಎದ್ದು ನಿಂತ ಲಿಯೋನ್ ಮೂತ್ರ ಮಾಡಲು ಹೋಗಿ ಬರುವುದಾಗಿ ಹೇಳಿ ನಿಧಾನವಾಗಿ ಹೋಟೆಲ್ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಅಲ್ಲಿಗೆ ಹುಡುಗನ ಉದಾರತೆ ಎಷ್ಟು ಅಂತ ತಿಳಿದುಕೊಂಡ ಯುವತಿ ಮುಗುಳ್ನಗುತ್ತಲೇ ಮನೆಯವರತ್ತ ನೋಡಿದ್ದಾಳೆ. ನಂತರ ಎಲ್ಲರೂ ಸೇರಿ ಬಿಲ್ ಮೊತ್ತ ಪಾವತಿಸಿ ಜಾಗ ಖಾಲಿ ಮಾಡಿದ್ದಾರೆ. ಇದು ಜಾಣ ಯುವತಿ ತನ್ನ ಹುಡುಗನ ಹುಡುಕುವ ಪರಿಯಾಗಿದ್ದು, ಸೋಷಿಯಲ್ ಮಿಡೀಯಾದಲ್ಲ್ಲಿ ಈ ಪ್ರಸಂಗ ಭಾರೀ ವೈರಲ್ ಆಗಿ ಸುದ್ದಿಯಾಗಿದೆ.

-ವೈರಲ್ ಸುದ್ದಿ

error: Content is protected !!