ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಬೃಹತ್ ಗಾತ್ರದ ತಿಮಿಂಗಿಲ ಕಾಣಿಸಿಕೊಂಡು ಮೀನುಗಾರರನ್ನು ಆತಂಕ ಪಡಿಸಿದ ಘಟನೆಯು ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ಸಂಭವಿಸಿದೆ. ಸಮುದ್ರದಲ್ಲಿ ಹವಾಮಾನ ವೈಪರೀತ್ಯವಾದ್ದರಿಂದ ಬೃಹತ್ ಗಾತ್ರದ ತಿಮಿಂಗಿಲವು ಇದೀಗ ತೀರ ಪ್ರದೇಶಗಳತ್ತ ಆಹಾರ ಅರಸಿ ಬರುತಿದ್ದು, ಇವತ್ತು ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ಕಾಣಿಸಿಕೊಂಡಿದೆ.
ಈ ದೃಶ್ಯವನ್ನು ಮೀನುಗಾರರು ತಮ್ಮ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಒಂದು ಕ್ಷಣ ತಿಮಿಂಗಿಲನ್ನು ಕಂಡಿರುವ ಮೀನುಗಾರರ ಎದೆ ಝಲ್ ಎಂದಿದೆ.
ಕೆಲದಿನಗಳ ಹಿಂದೆಯೇ ಭಟ್ಕಳ, ಕಾರವಾರ ಕಡಲ ತೀರಗಳಲ್ಲಿ ಅಪರೂಪದ ಟೈಗರ್ ಶಾರ್ಕ್ ಮೀನು, ಹಾಕ್ಸ್ ಬಿಲ್ ಹಾಗೂ ಗ್ರೀನ್ ಸೀ ಆಮೆಗಳ ಕಳೇಬರ ಪತ್ತೆಯಾಗಿತ್ತು.