ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಯಲ್ಲಿ ವೀಕೆಂಡ್ ಲಾಕ್ಡೌನ್: ಪೊಲೀಸ್ ರಿಂದ ಅನಗತ್ಯ ಓಡಾಟಕ್ಕೆ ಬ್ರೇಕ್

ಬೆಳಗಾವಿ: ಜಿಲ್ಲೆಯಲ್ಲಿ ವಿಕೇಂಡ್ ಲಾಕ್ಡೌನ್ ಮತ್ತಷ್ಟು ಕಠಿಣವಾಗಿದ್ದು, ಬೆಳ್ಳಂಬೆಳ್ಳಗೆ ಪೊಲೀಸರು ಫೀಲ್ಡಿಗಳಿದಿದ್ದಾರೆ. ಕೊರೊನಾ ಪಾಸಿಟಿವ್ ರೇಟ್ ಹೆಚ್ಚಿರುವ ಕಾರಣ ಜಿಲ್ಲೆಯಾದ್ಯಂತ ಜೂನ್ 21ರವರೆಗೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಇನ್ನು ನಿನ್ನೆ ಜಿಲ್ಲೆಯಲ್ಲಿ ಒಟ್ಟು 443 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಈವೆರೆಗೆ 690 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

error: Content is protected !!