ಹುಬ್ಬಳ್ಳಿ: ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಧ್ವಜ ಖಾದಿಯಿಂದ ಮಾಡಲಾಗುತ್ತದೆ. ಅದು ನಿಜಕ್ಕೂ ತುಂಬಾ ಉತ್ತಮ ಕಾರ್ಯ. ಯಾಕೆಂದರೆ ಅದು ದೇಶದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ನಾವು ರಾಷ್ಟ್ರೀಯ ಧ್ವಜದ ಪರವಾಗಿದ್ದೇವೆ ಎಂದು ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕೈಯಲ್ಲಿರುವ ಕೆಲಸವನ್ನು ಕಸಿದುಕೊಂಡು ದೊಡ್ಡ ಕುಳಗಳ ಜೇಬಿಗೆ ಹಾಕುವ ಕಾರ್ಯವನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.
ನೋಟು ಅಮಾನೀಕರಣ, ಕೃಷಿ ಕಾನೂನು ತಿದ್ದುಪಡಿಯಂತಹ ಯೋಜನೆಗಳು ಬಡವರಿಂದ ಕಿತ್ತುಕೊಂಡು ಇಬ್ಬರೂ ಮೂವರು ಜೇಬು ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಚರಕ ಮಹಾತ್ಮ ಗಾಂಧಿಯವರ ಸಂಕೇತವಾಗಿದ್ದು, ಇಂತಹ ದೇಶದ ಸಂಪ್ರದಾಯದ ಉಳಿವಿಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.