ಶಿವಮೊಗ್ಗ: ನಕಲಿ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉನ್ನತ ಹುದ್ದೆ ಗಿಟ್ಡಿಸಿಕೊಂಡ ಕುವೆಂಪು ವಿವಿ ಡೆಪ್ಯುಟಿ ರಿಜಿಸ್ಟ್ರಾರ್ ಎಂ.ಸೀತಾರಾಮ್ ರವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಕುವೆಂಪು ವಿವಿ ರಿಜಿಸ್ಟ್ರಾರ್ ಅಗಿದ್ದ ಎಸ್.ಎಸ್. ಪಾಟೀಲ್ ರವರು ಏಪ್ರಿಲ್ 2021 ರಂದು ಸೀತಾರಾಮ್ ರನ್ನು ಸೇವೆಯಿಂದ ವಜಾಗೊಳಿಸಿ, ಕಾನೂನು ರೀತಿ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
ಸೀತಾರಾಮ್ ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಹುದ್ದೆ ಗಿಟ್ಟಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಮಾಲೇರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಇವರು ಸಲ್ಲಿಸಿದ ಜಾತಿ ಪ್ರಮಾಣ ಪತ್ರದ ಸೂಕ್ತ ತನಿಖೆಗೆ ಅಂಬೇಡ್ಕರ್ ಪೀಪಲ್ ಪಾರ್ಟಿ ಆಗ್ರಹಿಸಿತ್ತು. ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರು ಆಗಿರುವ ಉಡುಪಿ ಜಿಲ್ಲಾಧಿಕಾರಿಗಳೂ ಸೂಕ್ತ ತನಿಖೆ ನಡೆಸಿ ಸೀತಾರಾಂ ರವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ಸಾಭಿತು ಪಡಿಸಿದ್ರು. ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸಕ್ಕೆ ಸೇರಿದ ಸೀತಾರಾಮ್ ಕುವೆಂಪು ವಿವಿಯಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್ ಆಗಿ ಬಡ್ತಿ ಪಡೆದಿದ್ದಾರೆ. ಇದು ಪರಿಶಿಷ್ಟ ಜಾತಿಗೆ ಸಿಗಬೇಕಾದ ಅಭ್ಯರ್ಥಿಗೆ ಆದ ಅನ್ಯಾಯವಾಗಿದೆ.
ಸೇವೆಯಲ್ಲಿ ಸೀತಾರಾಮ್ ಪಡೆದ ಸಂಬಳವನ್ಮು ಹಿಂಪಡೆಯಬೇಕೆಂದು ಉಡುಪಿ ಡಿಸಿ ಆದೇಶಿಸಿದ್ರು. ಇದರ ಅನ್ವಯ ಕುವೆಂಪು ವಿವಿ ರಿಜಿಸ್ಟ್ರಾರ್ ರವರು ಸೀತಾರಾಮ್ ರವರನ್ನು ಸೇವೆಯಿಂದ ವಜಾಗೊಳಿಸಿ ಏಪ್ರಿಲ್ ನಲ್ಲಿ ಆದೇಶ ಮಾಡಿದ್ದಾರೆ. ಇದು ಅಂಬೇಡ್ಕರ್ ಪೀಪಲ್ ಪಾರ್ಟಿಗೆ ಸಿಕ್ಕ ಜಯವೆಂದು ರಾಜ್ಯಾಧ್ಯಕ್ಷ ಸಿಎಂ ಕೃಷ್ಣ ಹೇಳಿದ್ದಾರೆ.