ಕೂಗು ನಿಮ್ಮದು ಧ್ವನಿ ನಮ್ಮದು

VRL ದಿಗ್ಗಜನಿಗೆ ಒಲಿದು ಬಂದ “ಪದ್ಮಶ್ರೀ” : ಗಣ್ಯರಿಂದ ಶುಭಾಶಯಗಳ ಮಹಾಪುರ

ಹುಬ್ಬಳ್ಳಿ: ಪದ್ಮಶ್ರೀ ಪ್ರಶಸ್ತಿ ಮೂಲಕ ಡಾ.ವಿಜಯ ಸಂಕೇಶ್ವರ ಅವರಿಗೆ ಮತ್ತೊಂದು ಕಿರೀಟ ಮುಡಿಗೇರಿದೆ. ಇದರಿಂದ ಸಹಜವಾಗಿಯೇ ಅವರ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಮಹನೀಯರಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಇದೇ ಖುಷಿಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, VRL ಸಮೂಹ ಸಂಸ್ಥೆಗಳ ಚೇರ್ಮೆನ್ ಡಾ.ವಿಜಯ ಸಂಕೇಶ್ವರ ಮಾದ್ಯಮಗಳೆದುರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೊಡಮಾಡುವ ಉಚ್ಚಮಟ್ಟದ ಪ್ರಶಸ್ತಿಗಳಲ್ಲಿ ಪದ್ಮಶ್ರೀ ಕೂಡ ಒಂದು. ಇಷ್ಟು ದೊಡ್ಡ ಪ್ರಶಸ್ತಿ ನನಗೆ ಲಭಿಸುತ್ತೆ ಅನ್ನೋದನ್ನ ಕನಸಿನಲ್ಲೂ ಯೋಚಿಸಿರಲಿಲ್ಲ ಎಂದಿರುವ ಅವರು, ಭಾರತದ ಲಾರಿ ಉದ್ಯಮದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ವಾಹನ ಉಳ್ಳವರು ಯಾರೂ ಇಲ್ಲ. ಆದರೆ, ನಮ್ಮಲ್ಲಿ 5000 ವಾಹನ ಹಾಗೂ 1200 ಶಾಖೆಗಳಿವೆ. ಇದೊಂದು ದೊಡ್ಡ ತಪಸ್ಸು. ಈ ತಪಸ್ಸಿನಲ್ಲಿ ನಮ್ಮ 20 ಸಾವಿರ ಸಿಬ್ಬಂದಿಯ ಶ್ರಮವಿದೆ ಎಂದಿದ್ದಾರೆ. ಇನ್ನು ದೇಶ ವಿದೇಶದ ಟಾಪ್ 10 ಕಂಪನಿಗಳ ಜೊತೆ ತುಲನಾತ್ಮಕವಾಗಿ ನೋಡಿದಾಗ ನಾವು ನಂ1 ಸ್ಥಾನದಲ್ಲಿದ್ದೇವೆ. ಅನೇಕ ಅಳತೆಗೋಲಿನಲ್ಲಿ ಮುಂಚೂಣಿಯಲ್ಲಿದ್ದೇವೆ. ಇದನ್ನೆಲ್ಲ ಸರ್ಕಾರ ಗಮನಿಸಿದೆ. ಈ ರೀತಿ ಸಾಧನೆ ಮಾಡಿರೋರು ಲಕ್ಷಾಂತರ ಜನ ಇದ್ದಾರೆ. ಅದರಲ್ಲಿ ನಾವೂ ಒಬ್ಬರು ಅನ್ನೊ ಹೆಮ್ಮೆ ಇದೆ. ಸಾಧನೆ ಮಾಡುವವರಿಗೆ ಕಿವಿಮಾತು ಉಪಯೋಗಕ್ಕೆ ಬರೋದಿಲ್ಲ. ನಮ್ಮ ಶ್ರಮ, ಶ್ರದ್ಧೆಯೇ ಉಪಯೋಗಕ್ಕೆ ಬರೋದು‌ ಎಂದು ಡಾ.ವಿಜಯ್‌ ಸಂಕೇಶ್ವರ ಹರ್ಷ ವ್ಯಕ್ತಪಡಿಸಿದರು.

error: Content is protected !!