ಕೂಗು ನಿಮ್ಮದು ಧ್ವನಿ ನಮ್ಮದು

ಈ ಬಾರಿ ಚುನಾವಣೆಯಲ್ಲಾದ ಮತದಾನದ ಪ್ರಮಾಣವೆಷ್ಟು? ಕಳೆದ ಐದು ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ,ಅಂಶ

ಬೆಂಗಳೂರು: ನಿನ್ನೆ ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. 224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಶೇಕಡಾವಾರು ಮತದಾನ
ಜಿಲ್ಲೆ ಶೇಕಡಾವಾರು ಮತದಾನ
ಬೆಳಗಾವಿ 76.61
ಬಾಗಲಕೋಟೆ 74.63
ವಿಜಯಪುರ 70.78
ಕಲಬುರಗಿ 65.22
ಯಾದಗಿರಿ 66.66
ಬೀದರ್ 71.5
ರಾಯಚೂರು 69.79
ಕೊಪ್ಪಳ 77.51
ಗದಗ 75.21
ಧಾರವಾಡ 73.14
ಉತ್ತರ ಕನ್ನಡ 76.72
ಹಾವೇರಿ 81.17
ವಿಜಯನಗರ 77.62
ಬಳ್ಳಾರಿ 76.23
ಚಿತ್ರದುರ್ಗ 81.2
ದಾವಣಗೆರೆ 78.11
ಶಿವಮೊಗ್ಗ 77.22
ಉಡುಪಿ 78.46
ಚಿಕ್ಕಮಗಳೂರು 77.89
ತುಮಕೂರು 83.49
ಚಿಕ್ಕಬಳ್ಳಾಪುರ 85.83
ಕೋಲಾರ 81.45
ಬೆಂಗಳೂರು ನಗರ 59.98
ಬೆಂಗಳೂರು ಗ್ರಾಮಾಂತರ 83.76
ಬಿಬಿಎಂಪಿ (ಉತ್ತರ) 52.88
ಬಿಬಿಎಂಪಿ (ಕೇಂದ್ರ) 55.45
ಬಿಬಿಎಂಪಿ (ದಕ್ಷಿಣ) 52.8
ರಾಮನಗರ 84.98
ಮಂಡ್ಯ 84.36
ಹಾಸನ 81.7
ದಕ್ಷಿಣ ಕನ್ನಡ 76.15
ಕೊಡಗು 74.74
ಮೈಸೂರು 75.07
ಚಾಮರಾಜನಗರ 77.89
ಒಟ್ಟು 72.67
ಜಿಲ್ಲಾವಾರು ಗರಿಷ್ಠ ಮತದಾನ ಕಂಡ ಜಿಲ್ಲೆ: ಚಿಕ್ಕಬಳ್ಳಾಪುರ -ಶೇ.85.83

ಜಿಲ್ಲಾವಾರು ಕನಿಷ್ಠ ಮತದಾನ ಕಂಡ ಜಿಲ್ಲೆ: ಬೆಂಗಳೂರು ನಗರ-ಶೇ.59.98 ಇನ್ನು ಕ್ಷೇತ್ರವಾರು ಗರಿಷ್ಠ ಮತದಾನ ಕಂಡ ವಿಧಾಮಸಭಾ ಕ್ಷೇತ್ರ: ಮೇಲುಕೋಟೆ – ಶೇ. 90.93 ಕನಿಷ್ಠ ಮತದಾನ ವಿಧಾನಸಭಾ ಕ್ಷೇತ್ರ: ಸಿವಿರಾಮನ್‌ ನಗರ

(ಬೆಂಗಳೂರು) – 47.43%
ಈ ಬಾರಿ ಮತದಾನ ಕಳೆದ ಬಾರಿಗಿಂತ 0.73 ಪ್ರತಿಶತದಷ್ಟು ಕಡಿಮೆಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ 73.04ರಷ್ಟು ಮತದಾನವಾಗಿತ್ತು.

ಕಳೆದ 5 ವರ್ಷದಲ್ಲಿ ರಾಜ್ಯದಲ್ಲಾದ ಮತದಾನ ಪ್ರಮಾಣ

ಈ ಬಾರಿಯ ಅಂಕಿ-ಅಂಶಗಳನ್ನು ನೋಡಿದರೇ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ

ವರ್ಷ. ಮತದಾನ ಪ್ರಮಾ, ಮತದಾನ ಅರ್ಹತೆ ಪಡೆದ್ದಿದ್ದವರು ಮತದಾನ ಮಾಡಿದವರು
2018 73.04 4,96,54,443. 3,64,24,365
2013 71.08. 4,36,52,789 3,13,53,015
2008. 65.1 4,01 71.345 2,61,56,630
2004 65 3, 85,86,754 2,50,88,438
1999 67.7. 3,42,84,098. 2,31,94,283

error: Content is protected !!