ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ನಡೆದಿದೆ. ಯರಝರ್ವಿ ಗ್ರಾಮದ 70 ವರ್ಷದ ಪಾರವ್ವ ಸಿದ್ನಾಳ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.