ಕೂಗು ನಿಮ್ಮದು ಧ್ವನಿ ನಮ್ಮದು

ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಬಿಡುಗಡೆ, ತಿಲಕ ಇಟ್ಟು ಸಿಹಿ ತಿನಿಸಿ ರಾಕಿ ಕಟ್ಟಿದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬರೋಬ್ಬರಿ ಒಂಬತ್ತು ತಿಂಗಳು ಜೈಲುವಾಸದ ನಂತರ ಮಾಜಿ ಸಚಿವ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಿಂದ ಇವತ್ತು ಬಿಡುಗಡೆಯಾಗಿದ್ದಾರೆ. ಇಂದು ವಿನಯ್ ಕುಲಕರ್ಣಿ ಅವರನ್ನು ಅವರ ಅಭಿಮಾನಿಗಳು ಮೆರವಣಿಗೆ ಮಾಡಿ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿ ಕೋವಿಡ್ ನಿಯಮಗಳನ್ನು ಬ್ರೇಕ್ ಮಾಡಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಹೊರ ಬರುತ್ತಿದ್ದಂತೆ ಸುದ್ದಿಗಾರರ ಜೊತೆಗೆ ಮಾತನಾಡಿದ ವಿನಯ್ ಕುಲಕರ್ಣಿ ನಾನು ನಿರ್ದೋಷಿಯಾಗಿ ಹೊರಗೆ ಬರುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ನಮ್ಮ ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಹೋರಾಟ ಮಾಡಿ ಸಂಪೂರ್ಣವಾಗಿ ಈ ಹೋರಾಟದಿಂದ ನಾನು ಹೊರಗೆ ಬರುತ್ತೇನೆ ಎಂದಿದ್ದೆ. ರಾಜಕೀಯ ಮುಖಂಡರು, ಕಾರ್ಯಕರ್ತರು, ಜೊತೆಗೆ ನನ್ನ ಅಭಿಮಾನಿಗಳು, ಕುಟುಂಬಸ್ಥರು ನನ್ನ ಸಲುವಾಗಿ ಸಾಕಷ್ಟು ಶ್ರಮ ಪಟ್ಡಿದ್ದಾರೆ.

ಅವರೆಲ್ಲರಿಗೂ ನಾನು ಸದಾ ಋಣಿ ಯಾಗಿರುತ್ತೇನೆ. ನಾನು ಕೂಡ ಒಂದು ಸಾಮಾನ್ಯ ರೈತ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಕ್ಷೇತ್ರದ ಜನ, ನನ್ನನ್ನು ನಂಬಿದ್ದಾರೆ ಅವರಿಗೋಸ್ಕರ ನಾನು ಎಂತಹದ್ದೇ ಹೋರಟವಾದ್ರು ಮಾಡಲು ನಾನು ಸಿದ್ಧ. ನಾನು ಬರೋಬ್ಬರಿ ೯ ತಿಂಗಳು ೧೬ ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಇದೊಂದು ಟಾಸ್ಕ್, ನಿಭಾಯಿಸಿದ್ದೇನೆ.

ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ. ಇನ್ನೊಂದು ಸಂತೋಷದ ವಿಚಾರ ಎನೇಂದರೆ ನನಗೆ ಓದುವ ಹವ್ಯಾಸ ಇರಲಿಲ್ಲ. ಆದ್ರೆ ನಾನು ಜೈಲಿಗೆ ಬಂದ ಮೇಲೆ ಸಾಕಷ್ಟು ಓದುವುದನ್ನು ಕಲಿತಿದ್ದೇನೆ. ಹಾಗೂ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಇದು ನನ್ನ ಜೀವನದಲ್ಲಿ ಅತಿ ದೊಡ್ಡ ಬದಲಾವಣೆಯನ್ನು ಮಾಡಿಕೊಂಡಿದ್ದೇನೆ. ಇನ್ನೂ ಮುಂದಿನ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದರ ಕುರಿತು ಹಲವಾರು ವಿಚಾರಗಳನ್ನು ಅರಿತಿದ್ದೇನೆ ಎಂದ್ರು.

error: Content is protected !!