ಇಷ್ಟು ದಿನ ಮೌನವಾಗಿದ್ದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಮೊನ್ನೆ ತಾನೇ ನಟಿ ಮೇಘಾ ಶೆಟ್ಟಿ ವಿರುದ್ಧ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಗುಡುಗಿದ್ದರು. ವಿಜಯಲಕ್ಷ್ಮಿ ವಾರ್ನಿಂಗ್ ಬೆನ್ನಲ್ಲೆ ಮೆಘಾ ಶೆಟ್ಟಿಯೂ ಸಹ ತಾವು ಪೋಸ್ಟ್ ಮಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿ ಸೈಲೆಂಟ್ ಆಗಿದ್ದರು. ಆದ್ರೆ ಇದೀಗ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಚರ್ಚೆಗೆ ಕಾರಣವಾಗಿದೆ.
ಹೌದು ಕಳೆದ ಕೆಲವು ದಿನಗಳ ಹಿಂದೆ ನಟ ದರ್ಶನ್ ಅವರ ಬರ್ತ್ ಡೇ ಆಚರಣೆ ಮಾಡಿದ್ದ ವಿಡಿಯೋ ಹಂಚಿಕೊಂಡಿದ್ದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೆಘಾ ಶೆಟ್ಟಿ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಅವರು ಗರಂ ಆಗಿದ್ದರು. ವಿಡಿಯೋ ಹಂಚಿಕೊಂಡು, ಇಂತಹ ನಾನ್‌ಸ್ಸೆನ್‌ಗಳನ್ನು ತಡೆದುಕೊಳ್ಳುವುದಿಲ್ಲ ಎಂದು ಸುದೀರ್ಘ ಬರಹ ಬರೆದುಕೊಂಡು ನೇರವಾಗಿ ಮೆಘಾ ಶೆಟ್ಟಿಯವರಿಗೆ ಟ್ಯಾಗ್ ಮಾಡಿದ್ದರು. ಇದಾದ ನಂತರ ಇಬ್ಬರು ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು.
ಇದೀಗ ಮತ್ತೇ ವಿಜಯಲಕ್ಷ್ಮಿಯವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೇಟಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ʼಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ. ಅದನ್ನು ಸೋಲಲು ಬಿಡಿ, ಅದನ್ನು ಅದೇ ರಕ್ಷಿಸಿಕೊಳ್ಳಲಿದೆʼ ಎಂಬ ಸಾಲುಗಳುಳ್ಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಸ್ಟರ್ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೆ, ಏಕಾಎಕಿ ಈ ರೀತಿಯ ಪೋಸ್ಟ್‌ನ್ನು ವಿಜಯಲಕ್ಷ್ಮಿಯವರು ಏಕೆ ಹಾಕಿದ್ರು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ದರ್ಶನ್ ಅಭಿಮಾನಿಗಳು ಸಹ ಯಾವಾಗ್ಲೂ ವಿಜಯಲಕ್ಷ್ಮಿಯವರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಮೊನ್ನೆ ಮೆಘಾ ಶೆಟ್ಟಿ ಪೋಸ್ಟರ್‌ಗೂ ಸಹ ಅಳತೆ ಮೀರಿ ನಡೆದುಕೊಳ್ಳಬಾರದು ಎನ್ನುವ ರೀತಿಯಲ್ಲಿ ಕಿಡಿಕಾರಿದ್ದರು. ಅಲ್ಲದೆ, ವಿಜಯಲಕ್ಷ್ಮಿಯವರಿಗೆ ನಾವಿದ್ದೀವಿ ಅಂತ ಬೆಂಬಲವಾಗಿ ನಿಲ್ಲುವು ಅನೇಕ ಕಾಮೆಂಟ್‌ಗಳನ್ನು ದರ್ಶನ್ ಪ್ಯಾನ್ಸ್ ಮಾಡಿದ್ದರು. ಇದೀಗ ಈ ಪೋಸ್ಟ್ ಏಕೆ ಹಾಕಿದ್ರು ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.