ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯಪುರ ಗುಂಡಿನ ದಾಳಿ ಪ್ರಕರಣ ಮತ್ತೋರ್ವ ಸಾವು: ಬೈರಗೊಂಡ ಸಾಹುಕಾರನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ವಿಜಯಪುರ: ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಮತ್ತೊಬ್ಬ ಸಾವನ್ನಪ್ಪಿದ್ದಾನೆ. ಮಹಾದೇವ ಸಾಹುಕಾರನ ಕಾರು ಚಾಲಕ ಲಕ್ಷ್ಮಣ ದಿಂಡೂರೆ ಸಾವನ್ನಪ್ಪಿದ್ದು, ಲಕ್ಷ್ಣಣ ದಿಂಡೂರೆ ಹೊಟ್ಟೆಗೆ ಗುಂಡು ಹೊಕ್ಕಿದ್ದರಿಂದ ಆಂತರಿಕವಾಗಿ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ.

ಮೃತ ಕಾರು ಚಾಲಕ ಲಕ್ಷ್ಮಣ ದಿಂಡೂರೆ

ಇನ್ನು ತೀವ್ರ ಗಾಯಗೊಂಡ ಮಹಾದೇವ ಸಾಹುಕಾರ ಭೈರಗೊಂಡಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ವಿಜಯಪುರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಯಶಸ್ವಿ ಶಸ್ತ್ರ ಚಿಕಿತ್ಸೆಯಲ್ಲಿ ಎರಡೂ ಭುಜಗಳಿಗೆ ತಾಗಿರುವ ಗುಂಡುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಇನ್ನು ವಿಜಯಪುರಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಭೇಟಿ ನೀಡಿ, ಇಡಿ ಪ್ರಕರಣವನ್ನು ಪರಿಶೀಲಿಸಲಿದ್ದಾರೆ.

ಇನ್ನು ಘಟನೆಯನ್ನು ಮೆಲುಕು ಹಾಕುವುದಾದರೆ, ವಿಜಯಪುರದ ಮಹಾದೇವ ಸಾಹುಕಾರ್ ಬೈರಗೊಂಡ ಮೇಲಿನ ಗುಂಡಿನ ಪ್ರಕರಣ ನಿನ್ನೆ ಮಧ್ಯಾಹ್ನ 3 ರಿಂದ 3.30 ರ ಮಧ್ಯೆ ಮಹಾದೇವ ಸಾಹುಕಾರನ ಮೇಲೆ ಗುಂಡಿನ ದಾಳಿಯಾಗಿದೆ. ಟಿಪ್ಪರ ಡಿಕ್ಕಿಯಾಗಿ ಅಪಘಾತ ಮಾಡಲಾಗಿದ್ದು, 10 ರಿಂದ 15 ಜನರ ತಂಡ ಕಲ್ಲು ತೂರಾಟ ಮಾಡಿ ಪಿಸ್ತೂಲಿನಿಂದ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಬಾಬುರಾಮ ಮಾರುತಿ ಕಂಚಾಳ (64) ಸ್ಥಳದಲ್ಲಿಯೇ ಸಾವಿಗೀಡಾಗಿ, ಮಹಾದೇವ ಸಾಹುಕಾರ ಭೈರಗೊಂಡ ಹೊಟ್ಟೆಗೆ 2, ಬೆನ್ನಿನ ಪಕ್ಕೆಲುಬಿಗೆ ಒಂದು ಗುಂಡು ತಗುಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

ಈ ದಾಳಿಯ ಹಿಂದೆ ಹಳೆಯ ವೈಷಮ್ಯವಿರುವ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಮಹಾದೇವ ಸಾಹುಕಾರ, ಮತ್ತು ಬೆಂಬಲಿಗರು 3 ಕಾರುಗಳಲ್ಲಿ ತೆರಳುತ್ತಿದ್ದರು. ಒಂದು ಕಾರಿನಲ್ಲಿ ಮಹಾದೇವ ಸಾಹುಕಾರ ಭೈರಗೊಂಡ, ಲಕ್ಷ್ಮಣ ಖೋಗಾಂವ, ಜಗಬೀರಸಿಂಗ್, ಹುಸೇನಿ ಭಜಂತ್ರಿ, ರಮೇಶ ಸಂಚರಿಸುತ್ತಿದ್ದರು. ಮತ್ತೋಂದು ಕಾರಿನಲ್ಲಿ ಶಿವರಾಜ ಭೈರಗೊಂಡ, ವಾಬುರಾಮ ಕಂಚನಾಳ ಸಂಚರಿಸುತ್ತಿದ್ದರು. ಮೂರನೇ ವಾಹನದಲ್ಲಿ ಐದು ಜನ ಸಂಚರಿಸುತ್ತಿದ್ದರು ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.

error: Content is protected !!