ಬೆಂಗಳೂರು: ಕೊನೆಗೂ ಅನ್ನದಾತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅಭಿನಂದನೆ ಸಲ್ಲಿಸಿದ್ರು. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಾಟಲ್ ಅವರು, ಸತತವಾಗಿ ಹದಿನೈದು ತಿಂಗಳುಗಳಿಂದ ೩ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಹೋರಾಟಕ್ಕೆ ದೇಶಾದ್ಯಂತ ರೈತರು, ಹೋರಾಟಗಾರರು ಜೊತೆಗೂಡಿ ಕೇಂದ್ರ ಸರ್ಕಾರದ ಮೊಂಡುತನದ ೩ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ನಡೆಸಿದ್ರು.
ಈಗ ಕರ್ನಾಟಕದಲ್ಲಿ ಸಹ ರೈತರ ಪರವಾಗಿ ಮೂರು ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸಿದ್ದು, ಇದೀಗ ಈ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಹಾಗಾಗಿ ಮತ್ತೊಮ್ಮೆ ದೇಶದ ಅನ್ನದಾತರಿಗೆ ಅಭಿನಂದನೆಗಳು ಎಂದು ವಾಟಾಳ್ ನಾಗರಾಜ್ ಹೇಳಿದ್ರು. ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದೆ. ದೇಶದ ರೈತರ ೩೫೫ ದಿನಗಳ ಹೋರಾಟದ ಬಳಿಕ ಫಲ ಸಿಕ್ಕಂತಾಗಿದೆ. ಕೃಷಿ ಕಾನೂನು ಹೋರಾಟದಲ್ಲಿ ೬೦೦ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ.