ಅಮಿತ್ ಶಾ ಮನೆಗೆ ಬರುವುದಾಗಿ ಹೇಳಿದ್ದರು. ಬಿಎಲ್ ಸಂತೋಷ್ ಅವರಿಗೆ ಕರೆ ಮಾಡಿ ಬೇಡ, ನಾನೇ ಬರುತ್ತೇನೆ ಅಂದೆ. ಆದಿಚುಂಚನಗಿರಿ ಮಠಕ್ಕೆ ಬರುತ್ತಾರೆ. ಅಲ್ಲಿಂದ ನಿಮ್ಮ ಮನೆಗೆ ಬಂದು ಟೀ ಕುಡಿದು ಹೋಗುತ್ತಾರೆ ಅಂದರು. ಅಮಿತ್ ಶಾ ನನ್ನ ಮನೆಗೆ ಬಂದರು. ಚೀಟಿ ತೆಗೆದು ನಾಲ್ಕೈದು ಪ್ರಶ್ನೆ ಕೇಳಿದ್ದರು. ಅದಾದ 8-12 ನಿಮಿಷದಲ್ಲಿ ದೆಹಲಿಗೆ ಬುಲಾವ್ ಬಂತು. ಅಲ್ಲಿ ದೊಡ್ಡವರನ್ನು ಭೇಟಿ ಮಾಡಿಸಿದರು. ಮಗನಿಗೆ ಟಿಕೆಟ್ ಕೊಟ್ಟುಬಿಡಿ ಅಂತ ಕೇಳಿಕೊಂಡೆ. ನೀನು ಹೋಗಿ ನಿಲ್ಲಬೇಕು ಅಂತ ಸೂಚನೆ ನೀಡಿದರು.
ಇದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ. ಬಿನ್ನಿಪೇಟೆ, ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ವರುಣ, ಚಾಮರಾಜನಗರದ ಹಳ್ಳಿಹಳ್ಳಿ ಸುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟಿದ್ದಾರೆ.