ಮಂಡ್ಯ: ಶಾಸಕ ಪ್ರೀತಂ ಗೌಡ ಇನ್ನೂ ಬೇಳೆಯ ಬೇಕಾದ ಹುಡುಗ ಇವರು ಹಾಸನ ಜಿಲ್ಲೆಯಲ್ಲಿ ಇನ್ನೂ ಬೆಳೆಯಬೇಕಾದವರು. ಇನ್ನೂ ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ.ಸೋಮಣ್ಣನವರು ಮಾತಿನ ಚಾಟಿ ಬೀಸಿದ್ರು.
ಇನ್ನೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾದ್ಯಮದವರ ಜೊತೆಗೆ ಮಾತನಾಡಿದ ಸೋಮಣ್ಣನವರು, ದೇವೇಗೌಡರ ಫ್ಯಾಮಿಲಿ ಗೆ ೫೦ ವರ್ಷ ರಾಜಕೀಯದ ಇತಿಹಾಸವಿದೆ. ಜೊತೆಗೆ ನಾನು ಸಹ ಸಚಿವ ಆಗಿದ್ದಾಗ ಪ್ರೀತಂ ಗೌಡ ಇನ್ನೂ ಹುಟ್ಟಿಯೇ ಇರಲಿಲ್ಲ. ಇನ್ನೂ ದೇವೇಗೌಡರ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ. ದೇವೇಗೌಡರು ನಮ್ಮರಾಷ್ಟದ ಪ್ರಧಾನಿ ಆಗಿದ್ದಂತವರು, ಇನ್ನೂ ನಾನು ಕೂಡ ಅವರ ಮನೆಗೆ ಹೋಗಿದ್ದೇನೆ.
ಇನ್ನೂ ಪ್ರೀತಂಗೌಡ ಅವರು ಬೆಳೆಯ ಬೇಕಾದ ಹುಡುಗ, ಜೊತೆಗೆ ಸುಮ್ಮ್ ಸುಮ್ಮನೆ ಹಾಗೆಲ್ಲಾ ಮಾತನಾಡುವುದು ಅಷ್ಟು ಸರಿಯಲ್ಲ ಎಂದು ವಿ. ಸೋಮಣ್ಣನವರು ಟಾಂಗ್ ಕೊಟ್ರು.
ಇನ್ನೂ ಇದೇ ವೇಳೆ ಸಚಿವರ ಖಾತೆ ಅಸಮಾಧಾನ ವಿಚಾರದ ಕುರಿತು ಮಾತನಾಡಿದ ಸೋಮಣ್ಣ ಅವರು, ಈ ವಿಚಾರದಲ್ಲಿ ಯಾರಿಗೂ ಅಸಮಾಧಾನವೇನಿಲ್ಲ. ಮುಖ್ಯಮಂತ್ರಿ ಬೊಮ್ಮಯಿ ಅವರು ಬುದ್ಧಿವಂತರಿದ್ದಾರೆ. ಜೊತೆಗೆ ರಾಜ್ಯ BJP ಸರ್ಕಾರವು ಒಳ್ಳೆಯ ಕೆಲಸವನ್ನು ಮಾಡುತ್ತಾ ಇದೆ. ಇನ್ನೂ ಆಗಸ್ಟ್ ೧೫ ರಂದು ಸಿಎಂ ಬಸವರಾಜ್ ಬೊಮ್ಮಾಯಿಯವರು, ಯಾರೂ ಯೋಚನೆ ಮಾಡದ ರೀತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಾರೆ. ಅದರ ಜೊತೆಗೆ ೧೫ ರಿಂದ ೨೦ ದಿವಸದಲ್ಲಿ ಸರ್ಕಾರ ಟೇಕಫ್ ಆಗಿದೆ ಎಂಬ ಭಾವನೆ ಜನರಿಗೂ ಸಹ ಬರುತ್ತದೆ ಎಂದ್ರು.