ಕೂಗು ನಿಮ್ಮದು ಧ್ವನಿ ನಮ್ಮದು

ಡಿಸಿಎಂ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ, ನಾನು ಸಚಿವನಾಗುವುದು ನಿಶ್ಚಿತ: ಉಮೇಶ್ ಕತ್ತಿ

ಚಿಕ್ಕೋಡಿ: ಮುಖ್ಯಮಂತ್ರಿ ಸ್ಥಾನ ಬಿಟ್ಟು ಇವಾಗ ಡಿಸಿಎಂ ಆಗುವ ಆಸೆಯನ್ನು ಹುಕ್ಕೇರಿ BJP ಶಾಸಕ, ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇನ್ನೂ ಡಿಸಿಎಂ ಆಗಬೇಕೆಂದು ಎಂದು ನಾನು ಬಯಸಿಲ್ಲ ಅವಕಾಶವನ್ನು ಕೊಟ್ಟರೆ ಅದನ್ನು ಚೆನ್ನಾಗಿ ನಿಭಾಯಿಸುತ್ತೇನೆ ಎಂದಿದ್ರು. ಇನ್ನೂ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಉಮೇಶ ಕತ್ತಿ, ನೂರಕ್ಕೆ ನೂರರಷ್ಟು ನಾನು ಸಚಿವನಾಗುತ್ತೇನೆ ಎಂಬ ಭರವಸೆ ನನಗೆ ಇದೆ. BJP ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ನಿವಾಸದಲ್ಲಿ ಸಹೋದರರು ಜಗಳವಾಡುವುದು ಸಹಜ. ಜೊತೆಗೆ ಪೂರ್ಣ ಪ್ರಮಾಣದಲ್ಲಿ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.

ಇನ್ನೂ ಮುಂದಿನ ದಿನಗಳಲ್ಲಿ ಒಳ್ಳೆಯ ಸಿಎಂ ಆಗಿ ರಾಜ್ಯಕ್ಕೆ ಕೊಡುಗೆಗಳನ್ನು ಕೊಡುತ್ತಾರೆ. ಇನ್ನೂ ಮುಂದೆ ಮತ್ತೆ BJP ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ಹೇಳಿದ್ದಾರೆ. ಜೊತೆಗೆ ದೆಹಲಿಗೆ ಹೋಗಿ ನಡ್ಡಾ ಅವರನ್ನು ಭೇಟಿಯಾಗುವುದು ನನ್ನ ಕರ್ತವ್ಯ ಅವರನ್ನು ಭೇಟಿ ಆಗೋದು ತಪ್ಪಾ? ಎಂದು ಸುದ್ದಿಗಾರರಿಗೆ ಪ್ರಶ್ನೆ ಮಾಡಿದ ಉಮೇಶ ಕತ್ತಿ, ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿಯಾಗಿದ್ದು ಸತ್ಯ. ಅವರು ಅವಕಾಶವನ್ನು ಕೊಟ್ಟರೆ ನಾನು ಸಚಿವನಾಗುತ್ತೇನೆ ಅವಕಾಶ ಕೊಡದೆಹೋದರೆ ಶಾಸಕನಾಗಿ ನನ್ನ ಕರ್ತವ್ಯ ಮುಂದುವರಿಸುತ್ತೇನೆ ಎಂದಿದ್ದಾರೆ.

error: Content is protected !!