ಕೂಗು ನಿಮ್ಮದು ಧ್ವನಿ ನಮ್ಮದು

ಉಡುಪಿಯ ಶ್ರೀಕೃಷ್ಣನಿಗೆ ಸ್ತ್ರೀ ಅಲಂಕಾರ: 9 ದಿನ ಸ್ತ್ರೀ ಅಲಂಕಾರದಲ್ಲಿದ್ದ ಶ್ರೀಕೃಷ್ಣ

ಉಡುಪಿ: ಉಡುಪಿಯ ಕೃಷ್ಣ ಮಠದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ನವರಾತ್ರಿಯ ಸಂದರ್ಭದಲ್ಲಿ 9 ದಿನಗಳ ಕಾಲ ಕೃಷ್ಣ ದೇವರಿಗೆ ಸ್ತ್ರೀ ಅಲಂಕಾರವನ್ನು ಮಾಡುವ ಅಪರೂಪದ ಆಚರಣೆ ಇಲ್ಲಿದೆ.

ಈ ಬಾರಿಯೂ ನವರಾತ್ರಿಯ ವೇಳೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಬಗೆ ಬಗೆಯ ಅಲಂಕಾರಗಳಿಂದ ಕೃಷ್ಣ ದೇವರನ್ನು ಪೂಜಿಸಿದರು. ಒಂಬತ್ತು ದಿನಗಳ ಕಾಲ ನಾನಾ ಬಗೆಯ ದೇವಿಯ ಅಲಂಕಾರಗಳಲ್ಲಿ ಉಡುಪಿಯ ಕಡೆಗೋಲು ಕೃಷ್ಣ ಭಕ್ತರಿಗೆ ದರ್ಶನ ನೀಡಿದ್ದು ವಿಶೇಷವಾಗಿತ್ತು.

ಕೈಮಗ್ಗವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನವರಾತ್ರಿಯ ಎರಡು ದಿನಗಳಲ್ಲಿ ಉಡುಪಿ ಸೀರೆಯನ್ನು ತೊಡಿಸುವ ಮೂಲಕ ದೇವರಿಗೆ ವಿಶೇಷ ಆರಾಧನೆ ನಡೆಸಲಾಯ್ತು. ಕೈಮಗ್ಗದಲ್ಲೇ ತಯಾರಿಸುವ ಉಡುಪಿ ಸೀರೆಗೆ ಮಾರುಕಟ್ಟೆ ಒದಗಿಸಿ, ಬಡ ನೇಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪರ್ಯಾ ಅದಮಾರು ಮಠ ಮಾಡುತ್ತಿದೆ. ಈ ಪ್ರಯುಕ್ತ, ಕೃಷ್ಣ ದೇವರಿಗೆ ಉಡುಪಿಸೀರೆ ತೊಡಿಸಿದ್ದು ಮಹತ್ವದ ಪ್ರೋತ್ಸಾಹವೆನಿಸಿದೆ.

error: Content is protected !!