ಕೂಗು ನಿಮ್ಮದು ಧ್ವನಿ ನಮ್ಮದು

ಕ್ಷಯರೋಗ ನಿಮ್ಮನ್ನು ಕಾಡುತ್ತಿದೆಯೇ.? ಹಾಗಿದ್ರೆ ಹೀಗೊಮ್ಮೆ ಮಾಡಿ ನೋಡಿ

ಕ್ಷಯರೋಗ: ದೈಹಿಕ ಶಕ್ತಿಯನ್ನು ಕುಂದುವಂತೆ ಮಾಡಿ, ದೇಹವನ್ನು ನಿಧಾನವಾಗಿ ಕೃಶಗೊಳಿಸುವ ಪ್ರಬಲ ರೋಗ ‘ಕ್ಷಯ’ ದೇಹದಲ್ಲಿ ಕ್ಷಯವನ್ನು ಉಂಟುಮಾಡುವ ರೋಗಗಳು ಮೈಕ್ರೋಬ್ಯಾಕ್ಟೀಯಂ ಜೀವಾಣುಗಳ ಕುಟುಂಬಕ್ಕೆ ಸೇರಿವೆ. ಕ್ಷಯರೋಗದ ಹರಡಿಕೆಗೆ,ಆ ರೋಗದಿಂದ ನರಳುವ ರೋಗಿಯೇ ಮೂಲ ಕಾರಣ. ಕೆಲವೇ ಕ್ಷಯಾಣುಗಳು ಪುಪ್ಪಸವನ್ನು ಸೇರಿದರೂ ರೋಗ ಪ್ರಾರಂಭವಾಗಬಲ್ಲದು.

ಬಲಿಯುತ್ತಿರುವ ರೋಗವಿದ್ದಾಗ ಜ್ವರ, ಕೆಮ್ಮು, ಸುಸ್ತು,ರಾತ್ರಿ ಬೆವರು,ರಕ್ತ ಕಫ ಮತ್ತು ಶರೀರದ ಕೃಶತೆ-ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು‌.ಪ್ರಾರಂಭದಲ್ಲಿ ತೀವ್ರತೆರನಾಗಿರದ ಕೆಮ್ಮು,ರೋಗ ಬೆಳೆದಾಗ ಬಿಡದೆ ತೋರಿ ಕಫ ಬರತೊಡಗುತ್ತದೆ.ಜ್ವರದ ಮತ್ತೊಂದು ಮುಖ್ಯ ಲಕ್ಷಣ. ಸಂಜೆ ಮತ್ತು ರಾತ್ರಿಯಲ್ಲಿ ಜ್ವರ ವಿಶೇಷ. ರಾತ್ರಿಯಲ್ಲಿ ಮೈ ಬೆವರುತ್ತದೆ. ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಮತ್ತೊಂದು ಲಕ್ಷಣ .ಕ್ಷಯರೋಗದಿಂದ ರಕ್ಷಣೆ ಮತ್ತು ನಿವಾರಣೆಗಾಗಿ ಈ ಕೆಳಗಿನ ಉಪಚಾರಗಳನ್ನು ಮಾಡಿ.

೧) ಶುದ್ಧ ಜೇನು ತುಪ್ಪದಲ್ಲಿ ಬೆಣ್ಣೆಯನ್ನು ಸೇರಿಸಿ ಬೆಳಗ್ಗೆ ಸಾಯಂಕಾಲ ಸೇವಿಸಿ.
೨) ನೀರಿನಲ್ಲಿ 50ಗ್ರಾಮ್ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಎರಡು ಸಲ ಕುಡಿಯಿರಿ.
೩)ಮೂರು ಗ್ರಾಮ್ ಲವಂಗದ ಚೂರ್ಣವನ್ನು ಜೇನು ತುಪ್ಪದಲ್ಲಿ ಸೇರಿಸಿ, ಕೆಲವು ದಿನಗಳವರೆಗೆ ನಿಯಮಿತವಾಗಿ ಸೇವೆಸಿ.
೪)ಅರ್ಧ ಚಮಚ ಬೆಳ್ಳುಳ್ಳಿಯ ರಸದಲ್ಲಿ ಎರಡು ಚಮಚ ಜೇನು ತುಪ್ಪವನ್ನು ಸೇರಿಸಿ, ದಿನದಲ್ಲಿ ನಾಲ್ಕು ಸಲ ಸೇವಿಸಿ.
೫)ಹಾಲಿನಲ್ಲಿ ಜೇನು ತುಪ್ಪವನ್ನು ಬೆರೆಸಿ ಕುಡಿಯಿರಿ.
೬)ಜೇನುತುಪ್ಪದಲ್ಲಿ ಸಿದ್ದಪಡಿಸಿದ ಸೇಬಿನ ಗುಳಂಬ ಮತ್ತು ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸಿ.
೭)ಪ್ರತಿನಿತ್ಯ ಸ್ವಲ್ಪ ಜೇನುತುಪ್ಪವನ್ನು ಸೇವಿಸುತ್ತಿದ್ದರೆ, ಶ್ವಾಸಕೋಶಗಳು ಬಲಿಷ್ಠವಾಗುತ್ತವೆ‌. ರಕ್ತ ಶುದ್ದಿಯಾಗುತ್ತದೆ. ಉಸಿರಾಟ ಮಂಡಲದ ರೋಗಗಳು ಆಕ್ರಮಣ ಮಾಡುವುದಿಲ್ಲ. ಅಲ್ಲದೆ ಕ್ಷಯರೋಗಿಗಳು ನಿಯಮಿತವಾಗಿ ಜೇನು ತುಪ್ಪವನ್ನು ಸೇವಿಸುತ್ತ ಬಂದರೆ, ಅವರಲ್ಲಿ ಅಸಾದಾರಣವಾದ ಸುಧಾರಣೆ ಕಂಡುಬರುತ್ತದೆ

error: Content is protected !!